ಬೆಂಗಳೂರು : ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದೆ. ಈಗ ಅಧ್ಯಯನಕ್ಕೆ ಕೇವಲ 10 ದಿನಗಳು ಮಾತ್ರ ಉಳಿದಿದ್ದು, ಕಾರ್ಯಗಳೆಲ್ಲ ಚುರುಕುಗೊಂಡಿವೆ.
ಪ್ರಜ್ಞಾನ್ ರೋವರ್ (Pragyan Rover) ಚಂದ್ರನ ಮೇಲ್ಮೈನ ದತ್ತಾಂಶ ಸಂಗ್ರಹಿಸುವ ಕೆಲಸವನ್ನು ಉತ್ತಮವಾಗಿ ಮಾಡುತ್ತಿದೆ. ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. 4 ಮೀಟರ್ ಸುತ್ತಳತೆ ಹೊಂದಿರುವ ಗುಂಡಿಯೊಂದು ರೋವರ್ ಗೆ ಅಡ್ಡಿ ಮಾಡುತ್ತಿದೆ. ಹೀಗಾಗಿಯೇ ರೋವರ್ ತನ್ನ ಹಾದಿ ಬದಲಾಯಿಸಿದೆ.
ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಜ್ಞಾನ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತಾಗಿ ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗ ಸೂಚಿಸಿದೆ. ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.