ಕಾಡಾನೆ ದಾಳಿಗೆ ತೀವ್ರವಾಗಿ ಗಾಯಗೊಂಡ ವೃದ್ಧೆ
ಮೈಸೂರು: ಕಾಡಾನೆಯೊಂದು ವೃದ್ಧೆಯ ಮೇಲೆ ದಾಳಿ ಮಾಡಿದ ಪರಿಣಾಮ ಕೈ ಮತ್ತು ಕಾಲು ಮೂಳೆ ಮುರಿದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದನ ಮೇಯಿಸುತ್ತಿದ್ದ ಲಕ್ಷ್ಮಮ್ಮ(55) ಮೇಲೆ ಆನೆ ದಾಳಿ ಮಾಡಿದೆ. ಹುಣಸೂರು ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ದಾಳಿಗೆ ವೃದ್ಧೆಯ ಬಲಗಾಲು ಮತ್ತು ಕೈ ಮೂಳೆ ಮುರಿದಿವೆ. ಲಕ್ಷ್ಮಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನೂ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆನೆ ದಾಳಿಗೆ ಕಾಳೇಗೌಡ ಎಂಬವರ ಹಸು ಸಾವನ್ನಪ್ಪಿದೆ.ಸ್ಥಳಕ್ಕೆ ವೀರನ ಹೊಸಳ್ಳಿ ವಲಯ ಅರಣ್ಯಧಿಕಾರಿ ನಮನ್ ನಾರಾಯಣ್ ನಾಯಕ್ ಭೇಟಿ ಪರಿಶೀಲಿಸಿದ್ದಾರೆ.