ನವದೆಹಲಿ: ವ್ಯಕ್ತಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿ ಹೂತು ಹಾಕಿರುವ ಘಟನೆ ನಡೆದಿದೆ.
ಈ ಘಟನೆ ಹರಿಯಾಣದ (Haryana) ರೊಹ್ಟಕ್ ನಲ್ಲಿ ನಡೆದಿದೆ. ಸಾವನ್ನಪ್ಪಿರುವ ಯುವತಿ ಹಾಗೂ ಗೆಳೆಯ ಸಂಜು ಆಕಾ ಸಲೀಮ್ ಪರಸ್ಪರ ಸಂಬಂಧ ಹೊಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ಯುವತಿ ಆರು ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ತನ್ನ ಗೆಳೆಯನೊಂದಿಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಳು.
ಹೀಗೆ ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧದಲ್ಲಿದ್ದ ಯುವತಿ ಗರ್ಭಿಣಿಯಾಗಿದ್ದಳು. ಹೀಗಾಗಿ ಗೆಳೆಯನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ, ಆತ ಮಾತ್ರ ಮದುವೆಗೆ ನಿರಾಕರಿಸುತ್ತಿದ್ದ. ಗರ್ಭಪಾತ ಮಾಡಿಸಲು ಮುಂದಾಗಿದ್ದ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಆತನನ್ನು ಭೇಟಿಯಾಗಲು ಯುವತಿ ದೆಹಲಿಯಿಂದ ರೊಹ್ಟಕ್‌ಗೆ ತೆರಳಿದ್ದಳು. ಆದರೆ ಮರಳಿ ಬಂದಿರಲಿಲ್ಲ. ಹೀಗಾಗಿ ಪೋಷಕರು ದೂರು ನೀಡಿದ ಮೇಲೆ ಈ ವಿಷಯ ಬೆಳಕಿಗೆ ಬಂದಿದೆ.
ಆರೋಪಿಯು ಕೊಲೆಗೆ ಪೂರ್ವಯೋಜಿತವಾಗಿ ತನ್ನ ಸ್ನೇಹಿತರಾದ ರಿತಿಕ್ ಮತ್ತು ಪಂಕಜ್ ರನ್ನು ಬಳಸಿಕೊಂಡಿದ್ದಾನೆ. ಕೃತ್ಯಕ್ಕಾಗಿ ಕರ್ವಾ ಚೌತ್ ದಿನವನ್ನು ಆಯ್ಕೆ ಮಾಡಿದ್ದರು. ಕಾರನ್ನು ಬಾಡಿಗೆಗೆ ಪಡೆದು ನಂಗ್ಲೋಯ್‌ನಿಂದ ಯುವತಿಯನ್ನು ರೋಹ್ಟಕ್‌ಗೆ ಕರೆದೊಯ್ದು, ಅಲ್ಲಿ ಅವಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ದೇಹ ಹೂತು ಹಾಕಿದ್ದಾರೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಓರ್ವ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.








