ಚಲಿಸುತ್ತಿದ್ದ ರೈಲಿನಲ್ಲೇ ಯುವಕನಿಗೆ ಹಾವು ಕಚ್ಚಿರುವ ಘಟನೆ ನಡೆದಿದೆ.
ಈ ಘಟನೆ ಝಾನ್ಸಿಯಲ್ಲಿ ನಡೆದಿದೆ. ಝಾನ್ಸಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಯುವಕನಿಗೆ ಜನರಲ್ ಕೋಚ್ ನಲ್ಲಿ ಹಾವು ಕಚ್ಚಿದೆ. ಹೀಗಾಗಿ ಜನರು ಭಯಭೀತರಾಗಿ ಓಡಿ ಹೋಗಿದ್ದಾರೆ. ಹೀಗಾಗಿ ರೈಲಿನಲ್ಲಿ ನೂಕುನುಗ್ಗಲು ಉಂಟಾಗಿದೆ. ಗ್ವಾಲಿಯರ್ನಲ್ಲಿ ರೈಲು ನಿಂತಾಗ, ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
30 ವರ್ಷದ ಭಗವಾಂದಾಸ್, ಮಧ್ಯಪ್ರದೇಶದ ಟಿಕಮ್ಗಢ ನಿವಾಸಿಯಾಗಿದ್ದು, ದೆಹಲಿಗೆ ಹೋಗಲು ಖಜುರಾಹೊ-ಝಾನ್ಸಿ ಮೆಮು ಮೂಲಕ ಭಾನುವಾರ ರಾತ್ರಿ ಝಾನ್ಸಿ ತಲುಪಿದ್ದರು. ನಂತರ ದೆಹಲಿಗೆ ಇನ್ನೊಂದು ರೈಲು ಹಿಡಿಯಬೇಕಿತ್ತು. ಝಾನ್ಸಿ ತಲುಪಿದಾಗ, ಭಗವಾಂದಾಸ್ ರೈಲಿನ ಜನರಲ್ ಕೋಚ್ ಗೆ ಹತ್ತಿದ್ದ ವೇಳೆ ಜನಸಂದಣಿ ಇದ್ದಿದ್ದಕ್ಕೆ ವರು ಬಾಗಿಲಿನ ಹಿಂದೆ ನಿಂತಿದ್ದರು. ರಾತ್ರಿ ವೇಳೆ ದಬ್ರಾ-ಗ್ವಾಲಿಯರ್ ನಡುವೆ ರೈಲು ಓಡುತ್ತಿದ್ದ ವೇಳೆ ಹಾವು ಕಚ್ಚಿದೆ.
ಆಗ ಹಾವು ಕಂಡ ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಆಗ ಪ್ರಯಾಣಿಕರೊಬ್ಬರು ರೈಲ್ವೇ ಸಹಾಯವಾಣಿ ಸಂಖ್ಯೆ 139ಕ್ಕೆ ಕರೆ ಮಾಡಿ ಘಟನೆಯ ಬಗ್ಗೆ ರೈಲ್ವೆ ಆಡಳಿತಕ್ಕೆ ಮಾಹಿತಿ ನೀಡಿ ಪ್ರಯಾಣಿಕರಿಗೆ ಸಹಾಯ ಕೋರಿದ್ದಾರೆ. ರೈಲು ಗ್ವಾಲಿಯರ್ ತಲುಪಿದಾಗ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.