ಪಾಪಿ ಮಗನೊಬ್ಬ ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ. ಸುಲೋಚನಮ್ಮ (60) ಕೊಲೆಯಾದ ತಾಯಿ. ಸಂತೋಷ್ (40) ಕೊಲೆ ಮಾಡಿದ ಆರೋಪಿ ಮಗನಾಗಿದ್ದಾನೆ. ತಾಯಿಯ ಹೆಸರಿಗೆ ಇದ್ದ ಹೊಲವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಹೀಗಾಗಿ ತಾಯಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ತಾಯಿಯು ಮಗನ ಹೇಳಿದ್ದಕ್ಕೆ ನಿರಾಕರಿಸಿದ್ದರ ಹಿನ್ನೆಲೆಯಲ್ಲಿ ಕೊಡಲಿಯಿಂದ ಹತ್ಯೆ ಮಾಡಿ ನಂತರ ಜಮೀನಿನಲ್ಲಿ ಮಲಗಿದ್ದಾನೆ. ಪಕ್ಕದ ಮನೆಯವರು ಸುಲೋಚನಮ್ಮಗೆ ಊಟ ಕೊಡಲು ಬಂದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.
ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸಂತೋಷ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.