ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ಪ್ರಕರಣ; 6 ಜನರಿಗೆ ಜಾಮೀನು
ನಟ ಅಲ್ಲು ಅರ್ಜುನ್ (Allu Arjun) ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮನೆಯ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಲಾಗಿತ್ತು. ಈಗ ಬಂಧಿತರಿಗೆ ಜಾಮೀನು ಸಿಕ್ಕಿದೆ.
ಆರು ಜನ ದಾಳಿಕೋರರನ್ನು ಬಂಧಿಸಿದ್ದ ಜ್ಯುಬ್ಲಿ ಹಿಲ್ಸ್ ಪೊಲೀಸರು, ಕೋರ್ಟ್ ಮುಂದೆ ಹಾಜರುಪಡಿಸಿದ್ದರು. 6 ಆರೋಪಿಗಳಿಗೆ ತಲಾ 10 ಸಾವಿರ ರೂ. ವೈಯಕ್ತಿಕ ಬಾಂಡ್ ಮೇಲೆ ಕೋರ್ಟ್, ಜಾಮೀನು ಮಂಜೂರು ಮಾಡಿದೆ.
ಠಾಣೆಯಲ್ಲಿ ಆರೋಪಿಗಳೆಲ್ಲಾ ಬೆಂಚ್ ಮೇಲೆ ಕುಳಿತು ಮೊಬೈಲ್ ನಲ್ಲಿ ಮುಳುಗಿದ್ದ ದೃಶ್ಯಗಳು ವೈರಲ್ ಆಗಿದ್ದವು. ಈ ವಿಷಯ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದವು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸದ್ಯ ಈ ವಿಷಯವಾಗಿಯೇ ಈಗ ತೆಲಂಗಾಣದಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ.
2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು
ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ...








