ನಾಯಿ ಕೃತಜ್ಞ ಪ್ರಾಣಿ ಎಂದೇ ಹೇಳುತ್ತಾರೆ. ಆಗಾಗಿ ನಾಯಿ ನಿಷ್ಠೆಗಳು ಬೆಳಕಿಗೆ ಬಂದಿರುತ್ತವೆ. ಹಲವರನ್ನು ರಕ್ಷಿಸಿರುವ ಕುರಿತು ನಾವು ಕೇಳಿರುತ್ತವೆ. ಸದ್ಯ ಇಂತಹ ಘಟನೆಯೊಂದು ವೈರಲ್ ಆಗಿದೆ.
ವೈರಲ್ ಆಗಿದ್ದ ವಿಡಿಯೋದಲ್ಲಿ ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರೊಂದು ಆಕೆಯನ್ನು ಹಿಂಬಾಲಿಸುತ್ತದೆ. ಹುಡುಗಿಯ ಮುಂದೆ ನಿಂತು ಇನ್ನೇನು ಕಾರಿಂದ ಇಳಿದು ಬಾಲಕಿಯನ್ನು ಅಪಹರಿಸಬೇಕು ಎನ್ನುವಷ್ಟರಲ್ಲಿ ನಾಯಿ ಕೂಗುತ್ತ ವಾಹನವನ್ನು ಹಿಂಬಾಲಿಸಲು ಪ್ರಯತ್ನಿಸಿದೆ.
ಸ್ವಲ್ಪ ದೂರದವರೆಗೆ ನಾಯಿ ಹೋಗಿ ವಾಪಸಾಗುತ್ತದೆ. ಆದರೆ ಯುವತಿಗೆ ಏನಾಗುತ್ತಿದೆ ಎಂದು ಅರಿಯದಂತಾಗಿ ನಿಂತಲೇ ನಿಂತು ಬಿಡುತ್ತಾಳೆ. ಕೊನೆಗೆ ಜೋರಾಗಿ ಅಳಲು ಪ್ರಾರಂಭಿಸಿ, ಅಲ್ಲಿಂದ ಹೋಗಿದ್ದಾಳೆ.
ಆದರೆ, ಈ ಘಟನೆ ಮುಂದೇನಾಗಿದೆ ಎಂಬುವುದರ ಕುರಿತು ತಿಳಿದಿಲ್ಲ. ತನಗೆ ಪರಿಚಯವಿಲ್ಲದಿದ್ದರೂ ಆ ನಾಯಿ ಯುವತಿಯನ್ನು ಕಾಪಾಡಿದ ಬಗೆಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಜನರು ನಾಯಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.








