ತುಮಕೂರು: ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕ ಶಂಕೆ ಮೇರೆಗೆ ಕ್ವಾರಂಟೈನ್‌ನಲ್ಲಿದ್ದ ವಿದ್ಯಾರ್ಥಿಯೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ವಿಫಲ ಯತ್ನ ನಡೆಸಿದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.
ಬಾಲಕ ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಕ್ವಾರಂಟೈನ್‌ನಲ್ಲಿದ್ದ. ಪರೀಕ್ಷೆ ಬರೆಯುವ ಸಲುವಾಗಿ ಮೂರು ದಿನಗಳ ಹಿಂದೆ ಸ್ವಗ್ರಾಮ ಶಿರಾ ತಾಲೂಕಿನ ಕಾಮಗೊಂಡನಹಳ್ಳಿಗೆ ಬಂದಿದ್ದ. ಯಾರಿಗೂ ವಿಷಯ ತಿಳಿಸಿದೆ ಪರೀಕ್ಷೆ ಬರೆಯಲು ಪಟ್ಟನಾಯಕನಹಳ್ಳಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ. ಆತ ಕ್ವಾರಂಟೈನ್‌ಲ್ಲಿದ್ದ ವಿಷಯ ತಿಳಿದು ಪರೀಕ್ಷಾ ಕೇಂದ್ರದಿAದ ವಾಪಸ್ ಕಳುಹಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿ ಮನೆಯ ಸುತ್ತ ಸ್ಯಾನಿಟೈಸ್ ಮಾಡಿದ್ದಾರೆ. ಹೆಚ್ಚಿನ ತಪಾಸಣೆಗಾಗಿ ಬಾಲಕನನ್ನು ತುಮಕೂರಿನ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಈ ವಿದ್ಯಾರ್ಥಿಗೆ ಅವಕಾಶ ನೀಡಲಾಗುತ್ತದೆ. ಈ ವಿದ್ಯಾರ್ಥಿಯನ್ನು ಮೊದಲ ಸಲ ಪರೀಕ್ಷೆ ಬರೆಯುತ್ತಿರುವರು (ಫ್ರೆಶರ್ಸ್) ಎಂದು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.