Supermassive Blackhole : ಭೂಮಿಯತ್ತ ದಿಕ್ಕು ಬದಲಿಸಿದ ಬೃಹತ್ ಬ್ಲಾಕ್ ಹೋಲ್….
ಅಂತರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡ ಹೊಸತೊಂದು (ಗ್ಯಾಲಕ್ಸಿ) ನಕ್ಷತ್ರಪುಂಜವೊಂದನ್ನ ಮರು ವರ್ಗಿಕರೀಸಿದೆ. ಇದರ ಮಧ್ಯದಲ್ಲಿರುವ ಬೃಹತ್ ಕಪ್ಪು ಕುಳಿ (ಬ್ಲಾಕ್ ಹೋಲ್) ಇದೀಗ ಭೂಮಿಯ ಕಡೆಗೆ ಗುರಿಯನ್ನ ಹೊಂದಿದೆ ಎಂದು ಖಗೋಳಶಾಸ್ತ್ರಜ್ಞರು ಕಂಡು ಹಿಡಿದಿದ್ದಾರೆ. ಆ ಗ್ಯಾಲಕ್ಸಿ ನಮ್ಮಿಂದ 657 ಮಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿದೆ.
“ನಾವು ಈ ನಕ್ಷತ್ರಪುಂಜದ ವಿಶಿಷ್ಟ ಗುಣಲಕ್ಷಣಗಳನ್ನ ಅಧ್ಯಯನ ಮಾಡಲು ಪ್ರಾರಂಭಿಸಿದೆವು. ನಮ್ಮ ಊಹೆಯೆಂದರೆ ಅದರ ಬೃಹತ್ ಕಪ್ಪು ಕುಳಿಯ ಸಾಪೇಕ್ಷ ಜೆಟ್ ಅದರ ದಿಕ್ಕನ್ನು ಬದಲಿಸಿದೆ ಮತ್ತು ಆ ಊಹೆಯನ್ನ ಖಚಿತಪಡಿಸಲು ನಾವು ಸಾಕಷ್ಟು ಅವಲೋಕನಗಳನ್ನು ನಡೆಸಬೇಕಾಗಿತ್ತು ಎಂದು ಗಾರ್ಸಿಯಾ, ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ (RAS) ಯ ಡಾ ಲೊರೆನಾ ಹೆರ್ನಾಂಡೆಜ್ ಹೇಳಿದರು.
ಖಗೋಳ ಶಾಸ್ರಜ್ಞರ ಅಧ್ಯಯನದ ಪ್ರಕಾರ ಈ ಗ್ಯಾಲಕ್ಸಿ ಭೂಮಿಯ ಕಡೆಗೆ ತನ್ನ ಕೇಂದ್ರವನ್ನ ತೋರಿಸಿವಂತೆ 90 ಡಿಗ್ರಿಗಳಷ್ಟು ತಿರುಗಿದೆ. ಇದರಿಂದಾಗಿ ಭೂಮಿಯ ಕಡೆಗೆ ಪ್ರಬಲವಾದ ರೇಡಿಯೋ ತರಂಗಾಂತರಗಳನ್ನ ಕಳುಹಿಸುತ್ತಿದೆ.
ಗ್ಯಾಲಕ್ಸಿ ಯ ಬ್ಲಾಕ್ ಹೋಲ್ ತನ್ನ ದಿಕ್ಕಿನ ಬದಲಾವಣೆಗೆ ಕಾರಣ ತಿಳಿದುಬಂದಿಲ್ಲ. ಆದರೂ ಕೆಲವು ಖಗೋಳ ಶಾಸ್ತ್ರಜ್ಞರು ಮತ್ತೊಂದು ಗ್ಯಾಲಕ್ಸಿಗೆ ಡಿಕ್ಕಿ ಹೊಡೆದು ದಿಕ್ಕು ಬದಲಿಸಿರಬಹುದು ಎಂದು ಅಂದಾಜಿಸಿದ್ದಾರೆ. ಬ್ಲಾಕ್ ಹೋಲ್ ನಿಂದ ಬಂದ ಜೆಟ್ ರೂಪದ ಸೃಷ್ಟಿ ಎರಡು ಬೃಹತ್ ರೆಡಿಯೋ ತರಂಗಗಳೊಂದಿದೆ ಭೂಮಿಯ ಕಡೆಗೆ ದಿಕ್ಕು ಮಾಡಿದೆ. ಇದು ನಮ್ಮ ಗ್ಯಾಲಕ್ಸಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
A Supermassive Blackhole Is Pointing Directly At Earth And Sending Powerful Radiation: Scientists