ಜಗತ್ತಿನಲ್ಲಿ ಆಗಾಗ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಸದ್ಯ ಬಾಲಕಿಯ ದೇಹದಲ್ಲಿ ರಾಮ ಹಾಗೂ ರಾಧೆಯ ಹೆಸರು ಮೂಡಿದ್ದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ.
ಉತ್ತರ ಪ್ರದೇಶದ ಹರ್ದೋಯಿಯಲ್ಲಿ ಈ ಅಚ್ಚರಿ ಘಟನೆ ನಡೆದಿದೆ. 8 ವರ್ಷದ ಬಾಲಕಿಯ ದೇಹದಲ್ಲಿ ರಾಧೆ-ರಾಧೆ, ರಾಮ್-ರಾಮ್ ಎಂಬ ಪದಗಳು ತಾವೇ ಮೂಡಿವೆ. ಇದನ್ನು ಕಂಡು ಬಾಲಕಿಯ ಕುಟುಂಬಸ್ಥರು, ಸಾರ್ವಜನಿಕರು ಹಾಗೂ ವೈದ್ಯರು ಅಚ್ಚರಿಗೊಂಡಿದ್ದಾರೆ.
ದೇವರನ್ನು ಪೂಜಿಸುವುದು ಎಂದರೆ ಈ ಚಿಕ್ಕ ಹುಡುಗಿಗೆ ತುಂಬಾ ಇಷ್ಟ. ಸದ್ಯ ಇದನ್ನು ಕಂಡು ಎಲ್ಲರೂ ಪವಾಡ ಎನ್ನುತ್ತಿದ್ದಾರೆ. ಹರ್ದೋಯ್ನ ಮಧೋಗಂಜ್ ಬ್ಲಾಕ್ನ ಸಹಿಜನ್ ಗ್ರಾಮದಲ್ಲಿ ವಾಸಿಸುತ್ತಿರುವ ರೈತ ದೇವೇಂದ್ರ ಅವರ ಪುತ್ರಿ ಈ ರೀತಿಯ ಆಶ್ಚರ್ಯಕ್ಕೆ ಕಾರಣವಾಗಿರುವ ಬಾಲಕಿಯಾಗಿದ್ದಾಳೆ.
ಕಳೆದ 15 ರಿಂದ 20 ದಿನಗಳಿಂದ ಬಾಲಕಿಯ ದೇಹದ ಮೇಲೆ ದೈವಿಕ ನಾಮಗಳು ಕಾಣಿಸಿಕೊಳ್ಳುತ್ತಿವೆ ಎನ್ನಲಾಗುತ್ತಿದೆ. ಈ ಹೆಸರುಗಳು ಹಿಂದಿ ಭಾಷೆಯಲ್ಲಿ ಕಾಣುತ್ತಿವೆ. ಆರಂಭದಲ್ಲಿ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಆನಂತರ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರೂ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಸಾಕ್ಷಿ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.