ಮೆಕ್ಸಿಕೋ: ಸಾವು ಹೇಗೆಲ್ಲಾ ಬರುತ್ತದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಆದರೆ, ನಮ್ಮ ಜೊತೆಗೆ ಇದ್ದವರು ಕ್ಷಣಮಾತ್ರದಲ್ಲಿ ಇಲ್ಲ ಅಂದರೆ ಹೇಗಾಗಬೇಡ.
ಹೌದು, ಫುಟ್‍ಬಾಲ್ ಆಟಗಾರನೊಬ್ಬನ ಸಾವಿಗೆ ಅಂತಿಮ ವಿದಾಯ ಹೇಳಿದ ಸ್ನೇಹಿತರ ರೀತಿ ಎಂತಹವರ ಕಲ್ಲು ಹೃದಯವನ್ನೂ ಕರಗಿ ನೀರಾಗಿಸುತ್ತದೆ. ಈ ಘಟನೆ ನಡೆದಿರುವುದು ದೂರದ ಮೆಕ್ಸಿಕೋದಲ್ಲಿ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಗೆಳೆಯರಿಂದ ಭಾವಪೂರ್ಣ ವಿದಾಯ
ಅಲೆಕ್ಸಾಂಡರ್‍ಗೆ ವಿಶಿಷ್ಟವಾಗಿ ಅಂತಿಮ ವಿದಾಯ ಹೇಳಲು ಸ್ನೇಹಿತರು ತೀರ್ಮಾನಿಸುತ್ತಾರೆ. ಫುಟ್‍ಬಾಲ್ ತರಬೇತಿ ಕೇಂದ್ರದ ಫುಟ್‍ಬಾಲ್ ಕೋರ್ಟ್‍ನಲ್ಲಿ ಅಲೆಕ್ಸಾಂಡರ್‍ನ ಶವಪಟ್ಟಿಗೆ ಇಡುತ್ತಾರೆ. ಅಲೆಕ್ಸಾಂಡರ್‍ನ ಶವದ ಸುತ್ತ ನಿಲ್ಲುವ ಸ್ನೇಹಿತರಲ್ಲಿ ಒಬ್ಬ ಚೆಂಡನ್ನು ಇನ್ನೊಬ್ಬನಿಗೆ ಪಾಸ್ ಮಾಡುತ್ತಾನೆ, ಆತ ಅಲೆಕ್ಸಾಂಡರ್‍ನ ಶವ ಪೆಟ್ಟಿಗೆಯತ್ತ ಚೆಂಡನ್ನು ಸ್ಪಿನ್ ಮಾಡುತ್ತಾನೆ. ಶವಪೆಟ್ಟಿಗೆ ತಾಕಿದ ಚೆಂಡು ಗೋಲ್ ಅಗುತ್ತದೆ. ಶವ ಪೆಟ್ಟೆಗೆಯಲ್ಲಿ ಮಲಗಿದ್ದ ಅಲೆಕ್ಸಾಂಡರನೇ ಎದ್ದು ಬಂದು ಗೋಲ್ ಹೊಡೆದ ಎಂಬಂತೆ ಭಾವಿಸಿ ಅಂತಿಮ ವಿದಾಯ ಹೇಳಿ ಶವಪೆಟ್ಟಿಯನ್ನು ತಬ್ಬಿಕೊಂಡು ಕಣ್ಣೀರು ಹಾಕುತ್ತಾರೆ.
ಈ ಭಾವನಾತ್ಮಕ ಕ್ಷಣವನ್ನು ಒಂದು ಎಲ್ಲರನ್ನು ತಬ್ಬಿಬ್ಬು ಮಾಡುತ್ತದೆ. ಅಲ್ಲಿ ಸೇರಿದ್ದ ಸ್ನೇಹಿತರೆಲ್ಲಾ ಅಲೆಕ್ಸಾಂಡರನ ಈ ಸಾವು ನೆನೆದು ಕಣ್ಣಿರಿಟ್ಟಿದ್ದಾರೆ. ವೈರಲ್ ಆದ ಈ ವಿಡಿಯೋವನ್ನು ಸುಮಾರು 50 ಲಕ್ಷಕ್ಕೂ ಹೆಚ್ಚು ವೀಕ್ಷಿಸಿದ್ದಾರೆ.
ಘಟನೆ ನಡೆದಿದ್ದು ಇಷ್ಟು
ದಕ್ಷಿಣ ಮೆಕ್ಸಿಕೋದ ಒಕ್ಸಾಕದಲ್ಲಿ ಫುಟ್‍ಬಾಲ್ ಆಟಗಾರ 16 ವರ್ಷದ ಅಲೆಕ್ಸಾಂಡರ್ ಮರ್ಟಿನೇಜ್ ಎಂಬಾತ ಕೊಲೆಯಾಗಿದ್ದಾನೆ. ಆತ ಪೊಲೀಸರ ಹಲ್ಲೆಯಿಂದಲೇ ಸಾವನ್ನಪ್ಪಿದ್ದಾನೆ ಎಂಬುದು ಸ್ಥಳೀಯರ ಆರೋಪವಾಗಿದೆ. ಅಮೆರಿಕದಲ್ಲಿ ಬಿಳಿಯರು ಹಾಗೂ ಕಪ್ಪು ವರ್ಣಿಯರ ನಡುವೆ ಸಂಘರ್ಷ ಸಾಮಾನ್ಯ.
ಅಮೆರಿಕಕ್ಕೆ ತೆರಳಿದ್ದ ಅಲೆಕ್ಸಾಂಡರ್, ಸೋಡಾ ತರುವುದಾಗಿ ಮನೆಯಿಂದ ಹೊರಗೆ ಹೋಗಿದ್ದನಂತೆ. ಪೊಲೀಸರು ಆತ ಕಳ್ಳ ಎಂದು ಭಾವಿಸಿ ಗುಂಡು ಹಾರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆ ನಡೆದಿರುವುದು ನಾಲ್ಕು ವರ್ಷಗಳ ಹಿಂದೆ ಎನ್ನಲಾಗಿದೆ. ಅಲೆಕ್ಸಾಂಡರ್ ಸಾವಿನ ನಂತರ ಮೆಕ್ಸಿಕೋದಲ್ಲಿ ನಡೆದ ಗಲಭೆಯಲ್ಲಿ ಹಲವು ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಮೆಕ್ಸಿಕನ್ನರನ್ನು ಅನಗತ್ಯವಾಗ ಬಂಧಿಸಿ ಹಿಂದೆ ನೀಡಲಾಗುತ್ತದೆ ಅನ್ನೋದೆ ಗಲಭೆಗೆ ಕಾರಣವಾಗಿದೆ.








