ರಾಮನಗರ : ಎರಡು ಬೈಕ್ ಗಳ ಮಧ್ಯ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಾಲೂಕಿನ ಚೆನ್ನಯ್ಯನಹಳ್ಳಿ ಬಳಿ ಈ ಘಟನ ನಡೆದಿದೆ. ನಂಜಯ್ಯ ಮಾಸ್ಟರ್(75) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಮತ್ತೊಂದು ಬೈಕ್ ನಲ್ಲಿ ತೆರಳುತ್ತಿದ್ದ ಸವಾರನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿ, ಟಿವಿಎಸ್ ಎಕ್ಸಲ್ ನಲ್ಲಿ ರಾಮನಗರದಿಂದ ಅಂಕನಹಳ್ಳಿಗೆ ತೆರಳುತ್ತಿದ್ದರು. ಈ ವೇಳ ಅಪಘಾತ ನಡೆದಿದ್ದರಿಂದಾಗಿ ಕಾಲು ಮುರಿತವಾಗಿ, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.