ಚಿಕ್ಕಮಗಳೂರು: ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಕಟ್ಟೆಯಲ್ಲಿ ನಡೆದಿದೆ. ಹೊರನಾಡು, ಶೃಂಗೇರಿ ಪ್ರವಾಸಕ್ಕೆ ಬಂದಿದ್ದ ಕಾರುಗಳ ಮಧ್ಯೆಯೇ ಈ ಸರಣಿ ಅಪಘಾತ ಸಂಭವಿಸಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೊಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶೃಂಗೇರಿ-ಹೊರನಾಡು ಪರ್ಯಾಯ ರಸ್ತೆ ಇದಾಗಿದ್ದು, ಇಲ್ಲಿ ತಿರುವುಗಳು ಹೆಚ್ಚಾಗಿವೆ. ಹೀಗಾಗಿಯೇ ಈ ಘಟನೆ ನಡೆದಿದೆ ಎನ್ನಲಾಗಿದೆ.