ಬೆಳಗಾವಿ: ಎರಡು ಕಾರುಗಳ ಮಧ್ಯೆ ಭೀಕರ ಅಪಘಾತ ನಡೆದಿದ್ದು, ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಬೈಲಹೊಂಗಲ(Bailhongal) ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ. ಬೈಲಹೊಂಗಲ ನಗರದ ನಿವಾಸಿ ಮಂಗಲ ಭರಮನಾಯ್ಕರ್ (50), ಚಾಲಕ ಶ್ರೀಶೈಲ ನಾಗನಗೌಡರ್ ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಗಾಯಗೊಂಡವರನ್ನು ರಾಯನಾಯ್ಕ ಭರಮನಾಯ್ಕರ್ (87), ಗಂಗವ್ವ ಭರಮನಾಯ್ಕರ್ (80), ಮಂಜುಳ ನಾಗನಗೌಡರ್ (30) ಹಾಗೂ ಇಂಚಲ ಗ್ರಾಮದ ಚಾಲಕ ಸುಬಾನಿ ವಕ್ಕುಂದ (28) ಗಾಯಗೊಂಡ ದುರ್ದೈವಿಗಳು ಎನ್ನಲಾಗಿದೆ.
ಗೋಕಾಕ್‍ನ ಕೊಣ್ಣೂರು ಪಟ್ಟಣದಿಂದ ಮನೆ ಗೃಹ ಪ್ರವೇಶಕ್ಕೆ ಬಟ್ಟೆ ಖರೀದಿಸಿ ಮತ್ತೆ ಮರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಗಾಯಾಳುಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು
ಮುರಗೋಡ ಠಾಣೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.