ನವದೆಹಲಿ: ಇಡೀ ವಿಶ್ವಕ್ಕೆ ಕೊರೊನಾ ಪರಿಚಯಿಸಿದ್ದ ಚೀನಾದಲ್ಲಿ ಈಗ ಮತ್ತೊಂದು ಭಯಾನಕ ವೈರಸ್ ಪತ್ತೆಯಾಗಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆಯು (Central Health Department) ಭಾರತದಲ್ಲಿ ಹೈ ಅಲರ್ಟ್ ಘೋಷಿಸಿದೆ.
ಚೀನಾದಲ್ಲಿ ಶಾಲೆಗೆ ತೆರಳುತ್ತಿರುವ ಮಕ್ಕಳಿಗೆ ಹೊಸ ವೈರಸ್ ಕಾಡುತ್ತಿದೆ. ನ್ಯೂಮೋನಿಯಾ (Pneumonia) ಮಾದರಿಯ ಲಕ್ಷಣಗಳಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದು ನೇರವಾಗಿ ಶ್ವಾಸಕೋಶಕ್ಕೆ ವೈರಸ್ ಅಟ್ಯಾಕ್ ಆಗುತ್ತದೆ. ಹೀಗಾಗಿಯೇ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಚೀನಾದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇದು ಕೊರೊನಾದಂತೆ ಹರಡುವ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಭಾರತದಲ್ಲಿ ಶ್ವಾಸಕೋಶ ಸಮಸ್ಯೆಗೆ ಸಂಬಂಧಿಸಿದ ವರದಿಗಳನ್ನು ಪರಿಶೀಲಿಸಲಾಗುತ್ತಿದೆ. ನಿಗೂಢ ವ್ಯಾಧಿ, ಅಸಾಧಾರಣ ಲಕ್ಷಣಗಳು ಕಂಡು ಬಂದಿಲ್ಲ. ಹೀಗಾಗಿ ತಜ್ಞರು, ಪರಿಶೀಲನೆ ನಡೆಸುತ್ತಿದ್ದಾರೆ.