ಬೆಂಗಳೂರು : ಆಟೋದ ಮೇಲೆ ಒಣಗಿದ ಮರ ಬಿದ್ದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಮಲ್ಲೇಶ್ವರಂನ (Malleswaram) ಸರ್ಕಲ್ ಮಾರಮ್ಮ ದೇವಾಲಯದ (Circle Maramma Temple) ಹತ್ತಿರ ನಡೆದಿದೆ.
ಮೂವರನ್ನು ರಕ್ಷಿಸಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಡಬ್ಲ್ಯುಎಸ್‌ಎಸ್‌ಬಿಗೆ ಸೇರಿದ ಜಾಗದಲ್ಲಿ ಒಣಗಿದ ಮರ ಆಟೋ ಮೇಲೆ ಬಿದ್ದು, ಮೂವರಿಗೆ ಗಾಯಗಳಾಗಿದೆ. ಆಟೋ ಡ್ರೈವರ್ ಸ್ಥಿತಿ ಗಂಭೀರವಾಗಿದ್ದು, ನಿಮ್ಹಾನ್ಸ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಒಣಗಿದ ಮರಗಳು ಸಾಕಷ್ಟು ಇದ್ದು, ಅವು ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.