ಪತಿ ದೈಹಿಕ ಸಂಪರ್ಕ ಬೆಳಸದೇ ಇದ್ದಿದ್ದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ..!

1 min read
complaint

ಪತಿ ದೈಹಿಕ ಸಂಪರ್ಕ ಬೆಳಸದೇ ಇದ್ದಿದ್ದಕ್ಕೆ ಪತ್ನಿ ಮಾಡಿದ್ದೇನು ಗೊತ್ತಾ..!

ಬೆಂಗಳೂರು: ಗೃಹಿಣಿಯೊಬ್ಬಳು ತನ್ನ ಪತಿಯ ವಿರುದ್ಧ ವಿಚಿತ್ರ ಕಾರಣವೊಂದಕ್ಕೆ ದೂರು ದಾಖಲು ಮಾಡಿದ್ದಾಳೆ.

ಹೌದು 36 ವರ್ಷದ ಮಹಿಳೆ ಮದುವೆಯಾಗಿ 2 ವರ್ಷ ಕಳೆದರೂ ತನ್ನ ಪತಿ ದೈಹಿಕ ಸಂಪರ್ಕ ನಡೆಸಿಲ್ಲ.

ಸಾಲದಕ್ಕೆ ದೈಹಿಕ ಹಾಗೂ ಮಾನಸಿಕವಾಗಿಯೂ ಚಿತ್ರಹಿಂಸೆ ನೀಡುತ್ತಿದ್ದ. ವರದಕ್ಷಿಣೆಗಾಗಿಯೂ ಕಿರುಕುಳ ನೀಡ್ತಿದ್ದ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ.

ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ.

complaint

ಇಷ್ಟೇ ಅಲ್ದೇ ದೈಹಿಕ ಸಂಬಂಧಕ್ಕೆ ಗಂಡ ಒಪ್ಪದ ವಿಚಾರವನ್ನ ಮಹಿಳೆಯು ತನ್ನ ಅತ್ತೆ-ಮಾವನ ಬಳಿಯೂ ಹೇಳಿಕೊಂಡಿದ್ದರಂತೆ.

ಆದ್ರೆ ಅವರು ಮಗನಿಗೆ ಬೈದು ಬುದ್ದಿವಾದ ಹೇಳುವ ಬದಲು ಆಕೆಗೆ ದೆವ್ವ ಹಿಡಿದಿದೆ ಎಂದು ಮಾಂತ್ರಿಕನನ್ನು ಕರೆಸಿ ಚಿತ್ರಹಿಂಸೆ ನೀಡಿದ್ದರು ಎಂದು ಸಹ ಮಹಿಳೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಪೊಲೀಸರು ಮಹಿಳೆ ಹಾಗೂ ಅತ್ತೆ ಮಾವನ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd