ಬಿರುಗಾಳಿಗೆ ಮುರಿದು ಬಿದ್ದ ವಿಂಡ್ ಫ್ಯಾನ್
ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಬಂಗಾರಕ್ಕನಹಳ್ಳಿ ಗುಡ್ಡದಲ್ಲಿ ಸಂಭವಿಸಿದ ಭಾರಿ ಬಿರುಗಾಳಿ ಸಹಿತ ಮಳೆಗೆ ವಿಂಡ್ ಫ್ಯಾನ್ ಮುರಿದು ಬಿದ್ದಿದೆ.
ಕೆಲವು ದಿನಗಳ ಹಿಂದೆ ಅಷ್ಟೇ ಗುಡ್ಡದಲ್ಲಿ ಖಾಸಗಿ ಕಂಪನಿಯೊಂದು ವಿಂಡ್ ಫ್ಯಾನ್ ದುರಸ್ತಿ ಮಾಡಿ ಮತ್ತೆ ಅಳವಡಿಸಿತ್ತು. ಆದರೆ ಗುಡ್ಡದಲ್ಲಿ ಬೀಸಿದ ಭಾರಿ ಗಾಳಿಗೆ ವಿಂಡ್ ಫ್ಯಾನ್ ಮುರಿದು ಬಿದ್ದಿದೆ.
ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ವಿಂಡ್ ಫ್ಯಾನ್ ಮುರಿದು ಬೀಳುವ ದೃಶ್ಯ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಡಿದಿದ್ದು, ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.