ಮಂಡ್ಯ : ಬಸ್ ಹತ್ತುವ ಸಂದರ್ಭದಲ್ಲಿ ಮಹಿಳೆ ಬಿದ್ದು ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಸಾರಿಗೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ಹತ್ತುತ್ತಿದ್ದ ಸಂದರ್ಭದಲ್ಲಿ ಮಹಿಳೆ ಹಿಂಬದಿ ಬಿದ್ದಿದ್ದಾರೆ. ಆಗ ಚಕ್ರ ಹರಿದು ಸಾವನ್ನಪ್ಪಿದ್ದಾರೆ.
ಬಸ್ ಹತ್ತುತ್ತಿದ್ದಂತೆ ಬಸ್ ಚಲಾಯಿಸಿದ್ದು, ಮಹಿಳೆ ಆಯ ತಪ್ಪಿ ಬಿದ್ದಿದ್ದಾರೆ. ಮಹಿಳೆಯ ಗುರುತಿ ಪತ್ತೆಯಾಗಿಲ್ಲ. ಆದರೆ, ಸಾವಿಗೂ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಈ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.








