ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಜೆ. ಸುರಪುರ ಬಳಿ ನಡೆದಿದೆ.
ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಆಸ್ಸಾಂನಿಂದ ಕೂಲಿ ಕೆಲಸಕ್ಕೆಂದು ಮಹಿಳೆ ಬಂದಿದ್ದರು. ಅವರು ಆರ್ ಎಂಸಿಯಲ್ಲಿ ಶುಂಠಿ ವಾಷಿಂಗ್ ಕೆಲಸ ಮಾಡಿಕೊಂಡಿದ್ದರು. ಸೆ. 30ರಂದು ಕೆಲಸಕ್ಕೆ ಹೋಗಲು ವಾಹನಕ್ಕಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆ ನಿಂತಿರುವುದನ್ನು ಗಮನಿಸಿದ್ದ ಕಾಮುಕ ಕೇಶವಮೂರ್ತಿ ನಾನು ಆರ್ ಎಂಸಿಗೆ ಹೋಗುತ್ತಿದ್ದೇನೆ ಎಂದು ಮಹಿಳೆಯನ್ನು ಪುಸಲಾಯಿಸಿ ಬೈಕ್ ನಲ್ಲಿ ಕೂರಿಸಿಕೊಂಡು ಬೈಕ್ ನಿಲ್ಲಿಸದೆ ಜೋಳದ ಹೊಲಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ಅಸ್ಸಾಂ ಮೂಲದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.








