ಮಹಿಳೆಯೊಬ್ಬರು ನಾಲ್ಕು ವರ್ಷಗಳಿಂದ ತನ್ನ ಪತಿಯ ಶವದೊಂದಿಗೆ ಮಲಗುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.
ರಷ್ಯಾದ ಮಹಿಳೆಯೇ ಈ ರೀತಿ ಬದುಕುತ್ತಿದ್ದರು ಎನ್ನಲಾಗಿದ್ದು, ಪುರಾತನ ಈಜಿಪ್ಟ್ ನ ಮಮ್ಮಿಯಿಂದ ಪ್ರೇರಿತವಾಗಿ ನಿಗೂಢ ಆಚರಣೆಗಳನ್ನು ಕೂಡ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಸ್ವೆಟ್ಲಾನಾ(50) ಎಂಬ ಮಹಿಳೆಯೇ ಕಳೆದ ನಾಲ್ಕು ವರ್ಷಗಳಿಂದಲೂ ತನ್ನ ಪತಿಯ ಶವವನ್ನು ತಾನು ಮಲಗುತ್ತಿದ್ದ ಹಾಸಿಗೆಯ ಮೇಲೆ ಇಟ್ಟುಕೊಂಡಿದ್ದಾಳೆ. ಅಲ್ಲದೇ, ಆ ಸ್ಥಳದಲ್ಲಿ ಈಜಿಪ್ಟ್ ಶಿಲುಬೆ, ಟ್ಯಾರೋ ಕಾರ್ಡ್ಗಳು, ತಾಯತಗಳು ಹಾಗೂ ಪ್ರಾಣಿಗಳ ತಲೆಬುರುಡೆಗಳು ಕೂಡ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಪತಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇಬ್ಬರು ಮಕ್ಕಳನ್ನು ಹೆದರಿಸಿ ಪತ್ನಿ, ಈ ರೀತಿ ಪತಿಯ ಶವ ಇಟ್ಟುಕೊಂಡಿದ್ದರು ಎನ್ನಲಾಗಿದೆ.