ನರ್ಸ್ ಒಬ್ಬರು ನವಜಾತ ಶಿಶುಗಳನ್ನೇ ಹತ್ಯೆ ಮಾಡುತ್ತಿದ್ದ ಘಟನೆಯೊಂದು ಯುಕೆಯಲ್ಲಿ ನಡೆದಿದೆ.
ಈ ಮಹಿಳೆ ಇಲ್ಲಿಯವರೆಗೆ 7 ನವಜಾತ ಶಿಶುಗಳನ್ನು ಹತ್ಯೆ ಮಾಡಿದ್ದಾಳೆ. ಅಲ್ಲದೇ, 6 ಶಿಶುಗಳನ್ನು ಕೊಲ್ಲಲ್ಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್ ಳನ್ನು ತಪ್ಪಿತಸ್ಥೆ ಎಂದು ನ್ಯಾಯಾಲಯವು ಆಗಸ್ಟ್ 21ರಂದು ಶಿಕ್ಷೆ ಪ್ರಕಟಿಸಲಿದೆ. 33 ವರ್ಷ ವಯಸ್ಸಿನ ಲೂಸಿ ಲೆಟ್ಟಿಯಿಂದ ಮೃತಪಟ್ಟ ಮಕ್ಕಳಲ್ಲಿ ಹೆಚ್ಚಿನವು ಅನಾರೋಗ್ಯದಿಂದ ಬಳಲುತ್ತಿದ್ದವು, ಕೆಲವು ಅಕಾಲಿಕವಾಗಿ ಜನಿಸಿದಂಥದ್ದಾಗಿದ್ದವು ಎನ್ನಲಾಗಿದೆ.
ಜೂನ್ 2015 ಮತ್ತು ಜೂನ್ 2016 ರ ನಡುವೆ ವಾಯುವ್ಯ ಇಂಗ್ಲೆಂಡ್ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಈ ಹತ್ಯೆ ಮಾಡಿದ್ದಳು. ಈ ವೇಳೆ ನರ್ಸ್ ಳನ್ನು ಮೂರು ಬಾರಿ ಬಂಧಿಸಲಾಗಿತ್ತು ಎನ್ನಲಾಗಿದೆ.