ಚಾಮರಾಜನಗರ: ಕೊಳೆತ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲದ ಆದರ್ಶನಗರದ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ರೇಖಾ(26) ಎನ್ನಲಾಗಿದೆ. ಮಹಿಳೆಯು ಪತಿಯ ಸಾವಿನ ನಂತರ ಲೈನ್ ಮ್ಯಾನ್ ಒಬ್ಬಾತನ ಜೊತೆ ಬೆಳೆಸಿದ್ದಳು ಎನ್ನಲಾಗಿದೆ.
27 ವರ್ಷದ ಅಗರ ಗ್ರಾಮದ ನಿವಾಸಿ ರೇಖಾ ಎಂಬ ಮಹಿಳೆಯ ಪತಿ ಕಳೆದೆರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಸಾವಿನ ನಂತರ ಲೈನ್ ಮ್ಯಾನ್ ಆಗಿದ್ದ ಗೆಳೆಯ ನಾಗೇಂದ್ರ ಅಲಿಯಾಸ್ ಆನಂದ್ ಎಂಬಾತನೊಂದಿಗೆ ಸ್ನೇಹ ಬೆಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿ ಸಾಕಷ್ಟು ರಾದ್ಧಾಂತವೇ ನಡೆದಿತ್ತು. ಆದರೂ ಮಹಿಳೆ ಆತನ ಗೆಳೆತನ ಬಿಟ್ಟಿರಲಿಲ್ಲ ಎನ್ನಲಾಗಿದೆ. ಸದ್ಯ ಗೆಳೆಯ ನಾಗೇಂದ್ರನ ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ನಾಗೇಂದ್ರನೇ ರೇಖಾಳನ್ನು ಹೊಡೆದು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.