ಶಿವಮೊಗ್ಗ: ಅನುಮಾನಾಸ್ಪದ ರೀತಿಯಲ್ಲಿ ವಿಷ ಸೇವಿಸಿದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಜಿಲ್ಲೆಯ ಸಾಗರ(Sagara) ನಗರದ ಕೆಳದಿ ರಸ್ತೆಯಲ್ಲಿ ನಡೆದಿದೆ.
ಇಲ್ಲಿಯ ನೆಯಲ್ಲಿ ಸಾವನ್ನಪ್ಪಿರುವ ಶಾಲಿನಿ (33) ಹಾಗೂ ಜಯರಾಮ್ ದಂಪತಿ ವಾಸಿಸುತ್ತಿದ್ದರು. ಪತಿ ಹಾಗೂ ಪತ್ನಿಯ ಮಧ್ಯೆ ಮನಸ್ತಾಪ ಬಂದಿತ್ತು. ಆದರೆ, ಸದ್ಯ ಮಹಿಳೆಯ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಹಲವಾರು ಶಂಕೆಗೆ ಕಾರಣವಾಗಿದೆ.
ಈ ದಂಪತಿ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಶಾಲನಿಗೆ ಇದು ಎರಡನೇ ಮದುವೆಯಾಗಿತ್ತು. ಆದರೆ, ಇಬ್ಬರ ಮಧ್ಯೆ ಅದೇನು ಬಂತೋ ಏನೋ ಡಿ. 31ರಂದು ಶಾಲಿನಿ ವಿಷ ಸೇವಿಸಿ, ನಂತರ ಕುಂದಾಪುರದಲ್ಲಿನ ಅವರ ಸಹೋದರಿಗೆ ಕರೆ ಮಾಡಿದ್ದಾರೆ. ನನ್ನ ಜೊತೆ ಯಾರು ಇಲ್ಲ, ನನ್ನನ್ನು ಬದುಕಿಸು ಎಂದು ನೋವಿನಿಂದ ಹೇಳಿದ್ದಾರೆ. ಕೂಡಲೇ ಅವರು ಪರಿಚಯಸ್ಥರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಕುರಿತು ಸಹೋದರಿ ದೂರು ನೀಡಿದ್ದಾರೆ. ಸಾವನ್ನಪ್ಪಿದ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಅವಳ ಸಾವಿಗೆ ಗಂಡ ಜಯರಾಮ್, ಆತನ ಅಕ್ಕ ವೀಣಾ, ತಂಗಿ ವಾಣಿ, ಸಂಬಂಧಿ ಹಾಗೂ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ರವಿ ಎಂದು ಬರೆದಿದ್ದಾರೆ. ಸದ್ಯ ಡೆತ್ ನೋಟ್ ಆಧಾರದ ಮೇಲೆ ನಾಲ್ವರ ಮೇಲೆ ಎಪ್ ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








