ವಿಜಯನಗರ: ಮದುವೆಯಾಗಲು ಯುವತಿ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಕೂಡ್ಲಿಗಿ (Kudligi) ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ. ಗುಡೇಕೋಟೆ ಗ್ರಾಮದ ಬಿ.ಮಧುಸೂದನ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ ಎನ್ನಲಾಗಿದೆ. ಯುವಕನ ತಂದೆ ಅರೆ ಹುಚ್ಚನಂತೆ ವರ್ತಿಸುತ್ತಾರೆಂಬ ಕಾರಣಕ್ಕೆ ಯುವಕನಿಗೆ ಕನ್ಯೆ ಕೊಡಲು ನಿರಾಕರಿಸುತ್ತಿದ್ದರು ಎನ್ನಲಾಗಿದೆ.
ಇದರಿಂದಾಗಿ ಮನನೊಂದ ಯುವಕ ಇತ್ತೀಚೆಗೆ ಕುಡಿತದ ಚಟಕ್ಕೂ ದಾಸನಾಗಿದ್ದ. ಅಲ್ಲದೇ, ಇನ್ನು ಮುಂದೆ ಮದುವೆಯಾಗುವುದಿಲ್ಲ ಎಂದು ವಿಷ ಸೇವಿಸಿದ್ದಾನೆ. ಕೂಡಲೇ ಆತನನ್ನು ವಿಮ್ಸ್ ಆಸ್ಪತ್ರೆಗ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧು ಸಾವನ್ನಪ್ಪಿದ್ದಾನೆ. ಈ ಕುರಿತು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.