ಶಿವಮೊಗ್ಗ: ವಿವಾಹ ನಿಶ್ಚಯವಾಗಿದ್ದ ಯುವಕನ ವಯಸ್ಸು ಹೆಚ್ಚಾದ ಹಿನ್ನೆಲೆಯಲ್ಲಿ ಯುವತಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ರಾಮನಗರದಲ್ಲಿ ನಡೆದಿದೆ.
ಬಿ.ಬಿ.ಮುಸ್ಕಾನ್ (20) ಸಾವನ್ನಪ್ಪಿದ ಯುವತಿ. ಮುಸ್ಕಾನ್ ಪ್ಯಾರ ಮೆಡಿಕಲ್ ಕೋರ್ಸ್ ಓದುತ್ತಿದ್ದಳು. ಈ ಸಂದರ್ಭದಲ್ಲಿ ಯುವತಿಗೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ನಿಶ್ಚಯವಾಗಿದ್ದ ಯುವಕನಿಗೆ ಹಾಗೂ ಯುವತಿಗೆ ವಯಸ್ಸಿನ ಅಂತರ ಹೆಚ್ಚಾಗಿದ್ದರ ಹಿನ್ನೆಲೆಯಲ್ಲಿ ವಿವಾಹ ನಿರಾಕರಿಸಿದ್ದಳು. ಆದರೆ, ಕುಟುಂಬಸ್ಥರು ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ರಾತ್ರಿ ವೇಳೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದ್ದು, ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.