ಕೊಡಗು: ಇತ್ತೀಚೆಗೆ ಯುವ ಪೀಳಿಗೆ ಎನರ್ಜಿ ಡ್ರಿಂಕ್ ಗಳತ್ತ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದು, ಹೀಗೆ ಕುಡಿದ ಯುವಕನೋರ್ವ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಅಸ್ವಸ್ಥಗೊಂಡ ಯುವಕನನ್ನು ವಿನೋದ್(27) ಎಂದು ಗುರುತಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿನೋದ್ ಮಡಿಕೇರಿಯ ಶಾಪ್ ಒಂದರಿಂದ ಎನರ್ಜಿ ಡ್ರಿಂಕ್ ಖರೀದಿಸಿ ಕುಡಿದಿದ್ದ. ಈತ ಕುಡಿಯುವ ಸಂದರ್ಭದಲ್ಲಿ ರೆಡ್ ಬುಲ್ ಟಿನ್ ಒಳಗೆ ಲೋಳೆಯಂತಹ ವಸ್ತು ಪತ್ತೆಯಾಗಿದೆ. ಈ ಘಟನೆ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎನರ್ಜಿ ಡ್ರಿಂಕ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.