ದೃಷ್ಟಿ ಹೀನತೆ ಮೆಟ್ಟಿ ನಿಂತ ಯುವಕನಿಗೆ ಮೈಕ್ರೋಸಾಫ್ಟ್ ನಿಂದ ವಾರ್ಷಿಕ 45 ಲಕ್ಷದ ಉದ್ಯೋಗ
ಆತ್ಮ ವಿಶ್ವಾಸವಿದ್ದರೆ ಸಾಧನೆಗೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದನ್ನ 25 ವರ್ಷದ ಭೂಪಾಲ್ ನ ಯುವಕ ಯಶ್ ಸೋನಾಕಿಯಾ ಸಾಬೀತುಪಡಿಸಿದ್ದಾರೆ.
ಹುಟ್ಟಿನಿಂದಲೇ ಕುರುಡುತನ್ನವನ್ನ ಜಯಸಿದ್ದ ಇಂದೋರ್‌ನ ಯುವಕ ಸಾಫ್ಟ್ ವೇರ್ ಇಂಜಿನಿಯರಿಂಗ್ ಓದಿ ಇದೀಗ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಜಾಗತಿಕ ಮಾಹಿತಿ ಮತ್ತು ತಂತ್ರಜ್ಞಾನ (ಐಟಿ) ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ವಾರ್ಷಿಕ 45 ಲಕ್ಷ ಪ್ಯಾಕೇಜ್ ನ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಆನ್‌ಲೈನ್ ಪರೀಕ್ಷೆ ಮತ್ತು ಮೂರು ಸುತ್ತಿನ ಸಂದರ್ಶನಗಳನ್ನ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ಜಿಲ್ಲಾ ನ್ಯಾಯಾಲಯದ ಕ್ಯಾಂಟೀನ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿರುವ ಭೂಪಾಲ್ ರಾಜ್ಯದ ಇಂದೋರ್ ನಿವಾಸಿಗಳದ ಯಶಪಾಲ್ ಸೋನಾಕಿಯಾ ಮತ್ತು ಯೋಗಿತಾ ಸೋಂಕಿಯಾ ಅವರ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಯಶ್ ಈಗ ಮೈಕ್ರೋಸಾಫ್ಟ್‌ನ ಬೆಂಗಳೂರಿನ ಕ್ಯಾಂಪಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಶೀಘ್ರದಲ್ಲೇ ಸೇರಲು ಸಿದ್ಧರಾಗಿದ್ದಾರೆ.
ಇಂದೋರ್‌ನ ಶ್ರೀ ಗೋವಿಂದರಾಮ್ ಸೆಕ್ಸಾರಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಳೆದ ವರ್ಷ ಬಿ.ಟೆಕ್ ಪದವಿ ಪಡೆದುಕೊಂಡಿರುವ ಯಶ್ ತಮ್ಮ ದೀರ್ಘಕಾಲದ ಸಹಾಯಕ ಸ್ಕ್ರೀನ್ ರೀಡರ್ ಸಾಫ್ಟ್‌ವೇರ್‌ನೊಂದಿಗೆ ಮನೆಯಿಂದಲೇ ತಮ್ಮ ಕೆಲಸವನ್ನ ನಿರ್ವಹಿಸಲಿದ್ದಾರೆ.