ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕ
ಇಂದಿನ ಶಿಕ್ಷಣ ವ್ಯವಸ್ಥೆ ಸರಿ ಇಲ್ಲ ನ್ನುವ ಕಾರಣ ನೀಡಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ನಗರದ ಖಾಸಗಿ ತಾಂತ್ರಿಕ ಕಾಲೇಜಿನ ವಿಧ್ಯಾರ್ಥಿ ಹೇಮಂತ್ ಸೆಲ್ಫಿ ವೀಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.
“ನಾನು ಸತ್ತ ಬಳಿಕ ಈ ವಿಡಿಯೋ ನಿಮಗೆ ಸಿಗುತ್ತದೆ. ಈ ವಿಡಿಯೋವನ್ನು ಎಲ್ಲ ಟಿವಿ, ನ್ಯೂಸ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಿ ಶಿಕ್ಷಣ ವ್ಯವಸ್ಥೆಗೆ ಬದಲಾಯಿಸಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ದರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕು,” ಎಂದು ಮನವಿ ಮಾಡಿದ್ದಾನೆ.
ನನ್ನನ್ನು ಸುಟ್ಟರೆ ಬೂದಿ ಆಗುತ್ತೇನೆ, ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ. ಹಾಗಾಗಿ ನನ್ನ ಅಂಗಾಂಗಗಳನ್ನು ದಾನ ಮಾಡಿ. ನನ್ನ ಅಂತ್ಯಸಂಸ್ಕಾರವನ್ನು ಸಿಎಂ, ಶಿಕ್ಷಣ ಸಚಿವರು, ನಿರ್ಮಾಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನೆರವೇರಿಸಬೇಕೆಂದು ಸಾಯುವ ಮುನ್ನ ವಿಡಿಯೋ ಮಾಡಿ ಆತ್ಮಹತ್ಯೆ .
“ನನ್ನ ಅಂತ್ಯಕ್ರಿಯೆ ಬಳಿಕ ಅಪ್ಪ- ಅಮ್ಮ ನೀವೂ ಧೈರ್ಯ ಕಳೆದುಕೊಳ್ಳದೇ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು. ಒಂದೆರಡು ಅನಾಥ ಮಕ್ಕಳನ್ನು ತಂದು ಮನೆಯಲ್ಲಿ ಸಾಕಿ. ಆ ಮಕ್ಕಳಲ್ಲಿ ನಾನು ಜೀವಂತವಾಗಿರುತ್ತೇನೆ. ಬದುಕಿದ್ದ ವ್ಯಕ್ತಿ ಸತ್ತರೆ ಯಾರೂ ನೆನಪು ಮಾಡಿಕೊಳ್ಳಲ್ಲ. ಬದಲಾವಣೆ ತಂದರೆ ಮಾತ್ರ ಸಮಾಜ ಆತನನ್ನು ನೆನಪಿನಲ್ಲಿಟ್ಟುಕೊಳ್ಳುತ್ತದೆ. ನಿಮ್ಮ ಕನಸನ್ನು ನಾನು ಈಡೇರಿಸಲು ಆಗುತ್ತಿಲ್ಲ ಎಂಬುದನ್ನು ಈ ವಿಡಿಯೋ ಮೂಲಕ ನನ್ನ ಅಭಿಪ್ರಾಯ ಹೇಳಿಕೊಳ್ಳುತ್ತಿದ್ದೇನೆ,” ಎಂದು ತನ್ನ ಅಪ್ಪ- ಅಮ್ಮನ ಹಾಗೂ ಸ್ನೇಹಿತೆಯ ಬಗ್ಗೆ ಹೇಳಿಕೊಂಡಿದ್ದಾನೆ.