ಪ್ರೀತಿಗೆ ಮನವೆಯವರು ಒಪ್ಪಿಗೆ ನೀಡದಿರುವುದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
22ವರ್ಷದ ಶ್ರಾವಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಿಲಿಕಾನ್ ಸಿಟಿಯ 8 ನೇ ಮೈಲಿ ಸಮೀಪದ ಹೆಸರಘಟ್ಟ ರಸ್ತೆಯ ಗೋಲ್ಡ್ ಜಿಮ್ಲಿ ರಿಸೆಪ್ಪನಿಸ್ಟ್ ಆಗಿ ಯುವತಿ ಕೆಲಸ ಮಾಡುತ್ತಿದ್ದಳು. ಶ್ರಾವಣಿ ರೀಲ್ಸ್ ಮಾಡಿಕೊಂಡು ಅಂತರ್ ಜಾತಿಯ ಯುವಕನನ್ನು ಪ್ರೀತಿಸುತ್ತ ಅರಾಮಾಗಿದ್ದಳು.
ಈ ಮಧ್ಯೆ ಕುಟುಂಬಸ್ಥರು ಅವಳಿಗೆ ಬೇರೊಂದು ವರ ಫಿಕ್ಸ್ ಮಾಡಿದ್ದರು. ಆದರೆ, ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಅಲ್ಲದೇ, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹೇಳಿದ್ದಾರೆ.
ಕುಟುಂಬಸ್ಥರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಬೇಸರಗೊಂಡ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.