ADVERTISEMENT
Wednesday, September 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ದರ್ಶನ್ ಆರೋಗ್ಯದ ಬಗ್ಗೆಯೇ ಜೈಲಾಧಿಕಾರಿಗಳದ್ದು ಚಿಂತೆ

ತೂಕ ಕಳೆದುಕೊಳ್ಳುತ್ತಿರುವ ನಟ ದರ್ಶನ್

Author2 by Author2
July 7, 2024
in Cinema, ಬೆಂಗಳೂರು, ಮನರಂಜನೆ
Share on FacebookShare on TwitterShare on WhatsappShare on Telegram

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಆಂಡ್ ಗ್ಯಾಂಗ್ ಅರೆಸ್ಟ್ ಆಗಿ ಒಂದು ತಿಂಗಳು ಕಳೆಯುತ್ತ ಬರುತ್ತಿದೆ. ಐಶಾರಾಮಿ ಹಾಗೂ ಮೂರು ಹೊತ್ತು ನಾನ್ ವೆಜ್ ನಂದು. ನಾನು ಪ್ಯೂರ್ ನಾನ್ ವೆಜ್ ಎಂದು ಹೇಳಿಕೊಂಡು ಬೀಗುತ್ತಿದ್ದ ದರ್ಶನ್ ಆರೋಗ್ಯದ ಬಗ್ಗೆಯೇ ಈಗ ಅಧಿಕಾರಿಗಳ ಚಿಂತೆಯಾಗಿದೆ.

ದರ್ಶನ್ ಜೈಲಿನಲ್ಲಿ ಬಂಧಿಯಾಗಿ ಇಕ್ಕಟ್ಟಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಪ್ರತಿದಿನ ಪಾರ್ಟಿ, ಗೆಳೆಯರೊಟ್ಟಿಗೆ ಸುತ್ತಾಟ, ಭರ್ಜರಿ ನಾನ್ ವೆಜ್ ಊಟ, ಸತತ ಸಿಗರೇಟು, ಬೇಕೆಂದಾಗ ಮದ್ಯ ಹೀಗೆ ಭರ್ಜರಿ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿದ್ದ ನಟ ದರ್ಶನ್ ಜೈಲಿನಲ್ಲಿ ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿದ್ದಾರೆ. ಇದರಿಂದ ಅವರು ಮಾನಸಿಕ ಜರ್ಜರಿತವಾಗಿದ್ದು ಅವರ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ ಎನ್ನಲಾಗುತ್ತಿದೆ. ಇದೇ ಈಗ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ಚಿಂತೆಗೆ ಕಾರಣವಾಗುತ್ತಿದೆ.

Related posts

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ: ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸವಿದ ಡಿಕೆಶಿ

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ: ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸವಿದ ಡಿಕೆಶಿ

September 9, 2026
ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

September 8, 2026

ರೇಣುಕಾ ಸ್ವಾಮಿ ಕೊಲೆಯ ನಂತರ ಜೂನ್ 11 ಪೊಲೀಸರು ದರ್ಶನ್ ಸೇರಿದಂತೆ ಆರೋಪಿಗಳನ್ನು ಬಂಧಿಸಿದ್ದರು. ಅಂದಿನಿಂದ ಇಲ್ಲಿಯವರೆಗೂ ದರ್ಶನ್ ಬಂಧಿಯಾಗಿದ್ದಾರೆ. ಅಲ್ಲದೇ, ಪ್ರಕರಣದಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಲ್ಲದೇ, ದರ್ಶನ್ ಅದರ ಜೊತೆಗೆ ಜೈಲಿನಲ್ಲಿ ತಮ್ಮ ದೇಹಕ್ಕೆ ಹೊಂದುವ ಸೂಕ್ತ ಆಹಾರ ಸಹ ಸಿಗದ ಕಾರಣ ಕೃಷವಾಗುತ್ತಾ ಸಾಗಿದ್ದಾರಂತೆ. ಕೇವಲ ಕಳೆದ ಹದಿನಾರು ದಿನದಲ್ಲಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಹೀಗಾಗಿಯೇ ಪರಪ್ಪನ ಅಗ್ರಹಾರದಲ್ಲಿನ ಜೈಲಾಧಿಕಾರಿಗಳಿಗೆ ದರ್ಶನ್ ಆರೋಗ್ಯದ ಬಗ್ಗೆ ತೀವ್ರ ಚಿಂತೆಯಾಗಿದೆ. ಸತತವಾಗಿ ತೂಕ ಕಳೆದುಕೊಳ್ಳುತ್ತಿರುವ ದರ್ಶನ್ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಇರುವ ಕಾರಣ ಅವರ ಆರೋಗ್ಯದ ಮೇಲೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರಿಂದ ಆರಂಭದ ದಿನಚರಿಗಿಂತಲೂ ಈಗಿನ ದಿನಚರಿಯಲ್ಲಿಯೂ ಸಾಕಷ್ಟು ಬದಲಾವಣೆಯಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ದರ್ಶನ್ ಜೈಲಿನಲ್ಲಿ ಯಾರಿಗೂ ಹೆಚ್ಚು ಬೆರೆಯದೇ ಏಕಾಂಗಿಯಾಗಿರಲು ಇಷ್ಟಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲವೂ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ದರ್ಶನ್ ಆರೋಗ್ಯದ ಮೇಲೆ ಜೈಲಧಿಕಾರಿಗಳು ಸಾಕಷ್ಟು ನಿಗಾ ಇಟ್ಟಿದ್ದಾರೆ. ಹೀಗಾಗಿ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡುತ್ತಲೇ ಇದ್ದಾರೆ.

ದರ್ಶನ್, ಪವಿತ್ರಾ ಗೌಡ ಅವರೆಲ್ಲ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪವಿತ್ರಾ ಗೌಡ ಅವರಿಗೆ ಎರಡು ಬಾರಿ ಅನಾರೋಗ್ಯ ಉಂಟಾಗಿತ್ತು. ಅವರ ಬಿಪಿಯಲ್ಲಿ ಏರುಪೇರಾಗಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದರ್ಶನ್ ಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ಅವರಿಗೆ ಸಮಸ್ಯೆ ಆದಂತಿದೆ. ದೇಹದ ತೂಕ ಇಳಿಕೆಯಾಗುತ್ತಿದೆ.

ಜುಲೈ 4 ರಂದು ದರ್ಶನ್ ಹಾಗೂ ಇನ್ನಿತರ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾಗಿತ್ತು. ಆದರೆ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಣೆ ಮಾಡಿದ್ದಾರೆ. ಆದರೆ, ಆ ಸಂದರ್ಭದಲ್ಲಿಯೂ ದರ್ಶನ್ ಗೆ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ ದರ್ಶನ್ ತುಂಬಾ ನಿತ್ರಾಣರಾಗಿದ್ದಾರೆ. ಮುಂದೆ ಕಾಲ ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.

 

Tags: Jail officials are worried about Darshan's health
ShareTweetSendShare
Join us on:

Related Posts

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ: ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸವಿದ ಡಿಕೆಶಿ

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ: ಕಾರ್ಮಿಕರ ಜೊತೆ ಕುಳಿತು ಇಡ್ಲಿ ಸವಿದ ಡಿಕೆಶಿ

by Shwetha
September 9, 2026
0

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಬೆಳ್ಳಂಬೆಳಗ್ಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ರೈತರು, ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು....

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

ಬೆಂಗಳೂರಿನಲ್ಲಿ ಕಾಫಿ-ಟೀ ಬೆಲೆ ಏರಿಕೆ: ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ

by Shwetha
September 8, 2026
0

ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿರುವ ಕಾಫಿ ಮತ್ತು ಟೀ ಪ್ರಿಯರಿಗೆ ಇದೀಗ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಸಕ್ಕರೆ ಮತ್ತು ಬೆಲ್ಲದ ಬೆಲೆಯಲ್ಲಿ ಇತ್ತೀಚೆಗೆ ಏರಿಳಿತ ಕಂಡುಬಂದ...

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

ನಗರ ಗಬ್ಬೆದ್ದು ನಾರುತ್ತಿದ್ದರೂ ಖಾಯಂ ಉದ್ಯೋಗ ಬೇಕೆ? ಕೆಲಸಕ್ಕೆ ಬಾರದವರಿಗೆ ಸರ್ಕಾರಿ ಭಾಗ್ಯವೇಕೆ? :ಪೌರಕಾರ್ಮಿಕರ ಬೇಡಿಕೆಗೆ ಸಚಿವ ಕೃಷ್ಣಬೈರೇಗೌಡ ಬ್ರೇಕ್-ಸಚಿವರ ಆಕ್ರೋಶಕ್ಕೆ ಉದ್ಯಮಿ ಕಿರಣ್ ಮಜುಂದಾರ್ ಶಾ ಬೆಂಬಲ

by Shwetha
September 7, 2026
0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸ್ವಚ್ಛತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ನೀಡಿದ್ದ ಖಡಕ್ ಹೇಳಿಕೆಗೆ...

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

ಸೈಫ್–ಕರೀನಾ ಪ್ರೇಮಕಥೆಯ ಆರಂಭದ ದಿನಗಳ ರಹಸ್ಯ ಬಿಚ್ಚಿಟ್ಟ ಅಕ್ಷಯ್ ಕುಮಾರ್

by Shwetha
September 6, 2026
0

ಬಾಲಿವುಡ್‌ನ ಜನಪ್ರಿಯ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೇಮಕಥೆ ಹೇಗೆ ಆರಂಭವಾಯಿತು ಎಂಬುದರ ಬಗ್ಗೆ ನಟ ಅಕ್ಷಯ್ ಕುಮಾರ್ ಕುತೂಹಲಕಾರಿ ಸಂಗತಿಯೊಂದನ್ನು...

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ ಶ್ರೀವಲ್ಲಿ: ಕೊಡಗಿನ ಬೆಡಗಿ ಈಗ ದೇಶದ ಬಾಕ್ಸ್ ಆಫೀಸ್ ಮಹಾರಾಣಿ: ನಂಬರ್ 1 ಪಟ್ಟಕ್ಕೇರಿದ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ

by Shwetha
September 4, 2026
0

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಅನಭಿಷಿಕ್ತ ಸುಲ್ತಾನಿ. ಖ್ಯಾತ ರಾಷ್ಟ್ರೀಯ ನಿಯತಕಾಲಿಕೆ ಇಂಡಿಯಾ ಟುಡೇ ದೇಶದ ಟಾಪ್ ನಾಯಕಿಯರ ಪಟ್ಟಿಯನ್ನು ಪ್ರಕಟಿಸಿದ್ದು, ರಶ್ಮಿಕಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram