ಹೈದರಾಬಾದ್: ಯುವತಿಯ ಮೇಲೆ ಆಕೆಯ ಬಾಲ್ಯದ ಸ್ನೇಹಿತ ಮತ್ತು ಆತನ ಸೋದರ ಸಂಬಂಧಿ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಮೇಲೆ ಮದ್ಯದ ಅಮಲಿನಲ್ಲಿ ರೆಸ್ಟೋರೆಂಟ್ ರೂಂನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಟೆಕ್ಕಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ರಾತ್ರಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದಿದ್ದಾಳೆ. ಕೆಲಸ ಸಿಕ್ಕಿದ್ದರಿಂದ ಬಾಲ್ಯದ ಗೆಳೆಯ ಹಾಗೂ ಶಾಲೆಯಲ್ಲಿ ತನ್ನ ಸಹಪಾಠಿಯಾಗಿದ್ದ ಯುವಕನ ಜೊತೆ ಸಂಭ್ರಮ ಆಚರಿಸಲು ಬಯಸಿದ್ದ ಆಕೆ ಪಾರ್ಟಿಯೊಂದನ್ನು ಆಯೋಜಿಸಿದ್ದಳು. ರೆಸ್ಟೋರೆಂಟ್ಗೆ ತನ್ನ ಕಸಿನ್ ಜೊತೆ ಬಂದಿದ್ದ ಆಕೆಯ ಗೆಳೆಯ ಮದ್ಯದ ಅಮಲಿನಲ್ಲಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆ ಆರೋಪಿಸಿ ದೂರು ನೀಡಿದ್ದಾಳೆ.
ವನಸ್ಥಲಿಪುರಂನಲ್ಲಿನ ರೆಸ್ಟೋರೆಂಟ್ ನಲ್ಲಿ ಮೂವರೂ ಮದ್ಯ ಸೇವಿಸಿದ್ದಾರೆ. ನಂತರ ಆ ವ್ಯಕ್ತಿ ಅವಳನ್ನು ರೆಸ್ಟೋರೆಂಟ್ ಆವರಣದಲ್ಲಿರುವ ಕೋಣೆಗೆ ಕರೆದೊಯ್ದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ತನ್ನ ಸ್ನೇಹಿತ ಆ ಕೋಣೆಯೊಳಗೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ನಂತರ ಸೋದರಸಂಬಂಧಿ ಕೋಣೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಘಾತಗೊಂಡ ಆಕೆ ರೂಂನಿಂದ ಹೊರಬಂದ ನಂತರ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.








