ಬಳ್ಳಾರಿ: ಜಿಲ್ಲೆಯ ವಿದ್ಯಾರ್ಥಿನಿಯನ್ನು ಅಪಹರಿಸಿ ಕೊಪ್ಪಳಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿರುವ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ನವೀನ್ (25) ಎಂದು ಗುರುತಿಸಲಾಗಿದೆ. ಯುವತಿ ಕಾಲೇಜ್ನಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಹಾಗೂ ಆತನ ಮೂವರು ಸ್ನೇಹಿತರು ಸಹೋದರ ಬಂದಿದ್ದಾನೆ ಎಂದು ಹೇಳಿ ಹೊರಗೆ ಕರೆದಿದ್ದಾರೆ. ನಂತರ ಕಾಲೇಜ್ನಿಂದ ಹೊರಗೆ ಬರುತ್ತಿದ್ದಂತೆ ಆಟೋದಲ್ಲಿ ಅಪಹರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ನಂತರ ಅಲ್ಲಿಂದ ಕೊಪ್ಪಳ ಜಿಲ್ಲೆಯ ಸಣಾಪುರ ಹತ್ತಿರದ ಹೊಟೇಲ್ ಗೆ ಕರೆದೊಯ್ದು ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ನಡೆಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಅತ್ಯಾಚಾರ ಮಾಡಿರುವ ಆರೋಪಿ ಆಕೆಯ ಸ್ನೇಹಿತ ಎನ್ನಲಾಗಿದೆ. ಸದ್ಯ ಪೊಲೀಸರು, ನವೀನ್ನನ್ನು ಬಂಧಿಸಿದ್ದು, ಉಳಿದ ಮೂರು ಜನ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ