ಹಾವೇರಿ: ಯುವತಿಯೊಬ್ಬಳು ಓಡಿ ಹೋಗಿದ್ದಾಳೆಂಬ ಕಾರಣಕ್ಕೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಥಳಿಸಿರುವ ಘಟನೆ ನಡೆದಿದೆ.
ಈ ಘಟನೆ ರಾಣೆಬೆನ್ನೂರು (Ranebennur) ತಾಲೂಕಿನ ಮುದೇನೂರ ಗ್ರಾಮದಲ್ಲಿ ನಡೆದಿದೆ. ಮುದೇನೂರ ಗ್ರಾಮದ ಪ್ರಕಾಶ ಎಂಬ ಯುವಕನೊಂದಿಗೆ ಚಳಗೇರಿಯ ಯುವತಿ ಓಡಿ ಹೋಗಿದ್ದಳು. ಇದರಿಂದಾಗಿ ಯುವತಿಯ ಕುಟುಂಬಸ್ಥರು ತೀವ್ರ ಸಿಟ್ಟಿಗಾಗಿದ್ದರು. ಕೋಪದ ಭರದಲ್ಲಿ ಪ್ರಕಾಶ್ ಸೋದರ ಮಾವ ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಮುದೇನೂರನಿಂದ ಕಿಡ್ನಾಪ್ ಮಾಡಿ ರಾಣೆಬೆನ್ನೂರ ಗ್ರಾಮೀಣ ಠಾಣೆಯ ಎದುರು ಅರೆಬೆತ್ತಲೆ ಮಾಡಿ, ಥಳಿಸಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿದವರು ಚಳಗೇರಿ ಗ್ರಾಮದ ಯುವತಿಯ ಸಂಬಂಧಿಕರು ಎಂದು ಪ್ರಶಾಂತ್ ಆರೋಪಿಸಿದ್ದಾರೆ.
ಯುವತಿಯು ಮೂರು ದಿನಗಳ ಹಿಂದೆ ಓಡಿ ಹೋಗಿದ್ದಳು. ಇದರ ಹಿಂದೆ ಸೋದರ ಮಾವ ಪ್ರಶಾಂತ್ ಕೈವಾಡ ಇದೆ ಎಂದು ತಿಳಿದು ಈ ಕೃತ್ಯವನ್ನ ಎಸಗಿದ್ದಾರೆ ಎನ್ನಲಾಗಿದೆ.