ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಯುವತಿಯೊಬ್ಬಳು ಮಧ್ಯರಾತ್ರಿ ಕುಡಿದ ಮತ್ತಲ್ಲಿ ಫುಲ್ ಕಿರಿಕ್ ಮಾಡಿಕೊಂಡಿರುವ ಘಟನೆ ನಡೆದಿದೆ.
ಬುದ್ಧಿ ಹೇಳಲು ಬಂದವರ ಮೇಲೆ ಎಗರುತ್ತಿದ್ದಳು. ಪೊಲೀಸರು ಮಧ್ಯರಾತ್ರಿ ಈ ಯುವತಿಯನ್ನು ಸಂಬಾಳಿಸಲು ಹರಸಾಹಸ ಪಟ್ಟಿದ್ದಾರೆ. ಮಹಿಳಾ ಸಿಬ್ಬಂದಿ ಇಲ್ಲದಿರುವ ಹಿನ್ನೆಲೆಯಲ್ಲಿ ಆಟೋದಲ್ಲಿ ಕುರಿಸಿ ಕಳುಹಿಸುವುದಕ್ಕೆ ಯುವತಿಯ ಮುಂದೆ ಪೊಲೀಸರು ಅಂಗಲಾಚಿದ್ದಾರೆ.
ಪೊಲೀಸರು ಮನವಿಗೂ ಕೇರ್ ಮಾಡದೇ ಯುವತಿ ರಂಪಾಟ ಮಾಡಿದ್ದಾರೆ.
ಬೇರೆ ಯುವತಿಯರ ಸಹಾಯದಿಂದ ಮನೆಗೆ ಕಳಿಸಲು ಪೊಲೀಸರು ಪ್ರಯತ್ನಿಸಿದ್ದಾರೆ. ಸಹಾಯಕ್ಕೆ ಬರುತ್ತಿದ್ದ ಯುವತಿರ ಮೇಲೆ ಯುವತಿ ಹಲ್ಲೆಗೆ ಮುಂದಾಗುತ್ತಿದ್ದಳು. ಕೊನೆಗೆ ಒಂದು ಗಂಟೆಯ ನಂತರ ಪೊಲೀಸರು ಯುವತಿಯನ್ನು ಆಟೋದಲ್ಲಿ ಕಳುಹಿಸಲು ಯಶಸ್ವಿಯಾಗಿದ್ದಾರೆ.








