ಮಗುವಿಗೆ/ನವಜಾತ ಶಿಶುವಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಈ ಹಂತಗಳನ್ನು ಅನುಸರಿಸಿ

1 min read
Aadhaar card for newborns

ಮಗುವಿಗೆ/ನವಜಾತ ಶಿಶುವಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಈ ಹಂತಗಳನ್ನು ಅನುಸರಿಸಿ

ಆಧಾರ್ ಕಾರ್ಡ್ ಫೋಟೋ ಗುರುತಿನಿಂದ ಹಿಡಿದು ಸರ್ಕಾರದ ಪ್ರಯೋಜನಗಳನ್ನು ಪಡೆಯುವವರೆಗೆ ವಿವಿಧ ಉದ್ದೇಶಗಳಿಗಾಗಿ ಬಳಸಲಾಗುವ ಪ್ರಮುಖ ದಾಖಲೆಯಾಗಿದೆ. ನಿಮ್ಮ ಮನೆ ಬಾಗಿಲಿನಲ್ಲಿ ಆಧಾರ್ ಸೇವೆಗಳನ್ನು ಲಭ್ಯವಾಗುವಂತೆ ಮಾಡಲು, ಯುಐಡಿಎಐ ಸಹ ಆಧಾರ್‌ನೊಂದಿಗೆ 35 ಕ್ಕೂ ಹೆಚ್ಚು ಸೇವೆಗಳನ್ನು ಪೂರೈಸುತ್ತದೆ. ಈ ಸೇವೆ ಭಾರತದಲ್ಲಿ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿದೆ.
ಇನ್ನು ಮುಂದೆ ದೇಶದಲ್ಲಿ ಹುಟ್ಟುವ ನವಜಾತ ಶಿಶುಗಳಿಗೆ ಆಧಾರ್ ಸೌಲಭ್ಯ ವನ್ನೂ ಯುಐಡಿಎಐ ಮುಂದಾಗಿದೆ.

Aadhaar card for newborns

ಹಾಗಾದರೆ ನಿಮ್ಮ ಮಗು ಅಥವಾ ನವಜಾತ ಶಿಶುವಿಗೆ ಆಧಾರ್ ಸೇವೆಗಳನ್ನು ‌ ಹೇಗೆ ದಾಖಲಿಸುವುದು?

ಯುಐಡಿಎಐ ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಇದಕ್ಕಾಗಿ ನೀವು ಅಪಾಯಿಂಟ್ಮೆಂಟ್ ಅನ್ನು ಬುಕ್ ಮಾಡಬೇಕಾಗುತ್ತದೆ.

ನಿಮ್ಮ ಮಗುವಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಈ ಹಂತಗಳನ್ನು ಅನುಸರಿಸಿ:

ಯುಐಡಿಐನ ಅಧಿಕೃತ ವೆಬ್ ಸೈಟ್ Ask.uidai.gov.in ಗೆ ಭೇಟಿ ನೀಡಿ

ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ

ಅಪಾಯಿಂಟ್ಮೆಂಟ್ ಪಡೆಯಲು ‘ಸೆಂಡ್ ಒಟಿಪಿ’ ಆಯ್ಕೆಯನ್ನು ಒತ್ತಿರಿ.

Aadhaar card for newborns

ಈಗ ಅಗತ್ಯ ದಾಖಲೆಗಳನ್ನು ಒದಗಿಸಿ.
(ಮಗುವಿನ ಜನನ ಪ್ರಮಾಣಪತ್ರ ಮತ್ತು ಪೋಷಕರಲ್ಲಿ ಒಬ್ಬರ ಆಧಾರ್ ಕಾರ್ಡ್)

ನಿಮಗೆ ಹತ್ತಿರದ ಆಧಾರ್ ಕಾರ್ಡ್ ಕೇಂದ್ರದಿಂದ ನಿಮ್ಮ ಅಪಾಯಿಂಟ್ಮೆಂಟ್ ಕಾಯ್ದಿರಿಸಲಾಗುತ್ತದೆ.

ನಿಗದಿತ ಸಮಯದಲ್ಲಿ ಎಲ್ಲಾ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಕೇಂದ್ರವನ್ನು ತಲುಪಿ.

ಶೀಘ್ರದಲ್ಲೇ ಯುಐಡಿಎಐ ನಿಮಗೆ ಆಧಾರ್ ಕಾರ್ಡ್ ನೀಡಲಾಗುವುದು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd