ಹಾರ್ದಿಕ್ ಪಾಂಡ್ಯರಿಂದ ನಿರೀಕ್ಷಿಸಿದ್ದು, ಶಾರ್ದೂಲ್ ಮಾಡಿ ತೋರಿಸಿದ

1 min read
aakash-chopra-comments on shardul-thakur-hardik-pandya saaksha tv

ಹಾರ್ದಿಕ್ ಪಾಂಡ್ಯರಿಂದ ನಿರೀಕ್ಷಿಸಿದ್ದು, ಶಾರ್ದೂಲ್ ಮಾಡಿ ತೋರಿಸಿದ

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಲ್ ರೌಂಡ್ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ ಅವರ ಮೇಲೆ ಭಾರತದ ಮಾಜಿ ಆಟಗಾರ ಮತ್ತು ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಪ್ರಶಂಸೆಯ ಸುರಿಮಳೆಗೈದಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಏಳು ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಶಾರ್ದೂಲ್, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸ್ಥಾನವನ್ನ ಸಂಪೂರ್ಣವಾಗಿ ತುಂಬಿದ್ದಾರೆ.

ಹಾರ್ದಿಕ್ ಪಾಂಡ್ಯರಿಂದ ನಾವು ಏನನ್ನ ನಿರೀಕ್ಷೆ ಮಾಡಿದ್ದೇವೋ ಅದನ್ನ ಶರ್ದೂಲ್ ಮಾಡಿದ್ದಾರೆ ಎಂದು ಎಂದು ಅಭಿಪ್ರಾಯಪಟ್ಟಿದ್ದಾರೆ.  

aakash-chopra-comments on shardul-thakur-hardik-pandya saaksha tv

ಬ್ಯಾಟಿಂಗ್ ನಲ್ಲಿ ಶರ್ದೂಲ್ ಅವರನ್ನ ಪಾಂಡ್ಯ ಜೊತೆಗೆ ಹೋಲಿಸಲಾಗದು ಎಂದ ಆಕಾಶ್ ಚೋಪ್ರಾ, ಬೌಲಿಂಗ್ ನಲ್ಲಿ ಮಾತ್ರ ಶರ್ದೂಲ್ ನಿರೀಕ್ಷೆಗೂ ಮೀರಿ ಮಿಂಚುತ್ತಿದ್ದಾರೆ.

 ಶಾರ್ದೂಲ್  ಬ್ಯಾಟಿಂಗ್ ನಲ್ಲಿ ಮಿಂಚಿನ ಇನ್ನಿಂಗ್ಸ್ ಆಡುವುದನ್ನು ನೋಡಿದ್ದೇವೆ.  ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದರೆ ಅವರಿಂದ ಬೃಹತ್ ಇನ್ನಿಂಗ್ಸ್ ನಿರೀಕ್ಷಿಸಬಹುದು ಎಂದು  ಚೋಪ್ರಾ ಆಶಿಸಿದ್ದಾರೆ.

ಅಲ್ಲದೇ ಶಾರ್ದೂಲ್ ರೂಪದಲ್ಲಿ ಟೀಂ  ಇಂಡಿಯಾಗೆ ಉತ್ತಮ ಬೌಲಿಂಗ್ ಆಲ್ ರೌಂಡರ್ ಸಿಕ್ಕಂತಾಗಿದೆ. ಆದರೆ, ಭಾರಿ ನಿರೀಕ್ಷೆಗಳು ಅವರ ಮೇಲೆ ಒತ್ತಡ  ಹೆಚ್ಚಿಸಬಹುದು ಎಂದಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd