ಪದೇ ಪದೇ ಕೊಹ್ಲಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ ಆಕಾಶ್ ಚೋಪ್ರಾ Aakash Chopra saaksha tv
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಪದೇ ಪದೇ ಟಾರ್ಗೆಟ್ ಮಾಡುತ್ತಲೇ ಇದ್ದಾರೆ.
ಕಿಂಗ್ ವಿರಾಟ್ ಕೊಹ್ಲಿ, ಒಬ್ಬರ ಬ್ಯಾಟರ್ ಆಗಿ ಒಬ್ಬ ನಾಯಕನಾಗಿ ಟೀಂ ಇಂಡಿಯಾಗೆ ಅದೆಷ್ಟೋ ಐತಿಹಾಸಿಕ ಗೆಲುವುಗಳನ್ನ ತಂದುಕೊಂಡಿದ್ದಾರೆ. ವಿರಾಟ್ ಬಳಿ ನಾಯಕತ್ವದ ಗುಣಗಳಿಲ್ಲ ಎಂದು ದೂರುವ ಟೀಕಾಕಾರರಿಗೆ ದಾಖಲೆಗಳೇ ಉತ್ತರ ನೀಡುತ್ತಿವೆ.
ಆದ್ರೂ ವಿರಾಟ್ ಮೇಲೆ ಟೀಕೆಗಳ ಸುರಿಮಳೆ ಆಗುತ್ತಲೇ ಇರುತ್ತದೆ. ಇದಕ್ಕೆ ತಲೆಕೆಡಿಸಿಕೊಳ್ಳದ ವಿರಾಟ್ ಆನೆ ನಡೆದಿದ್ದೇ ದಾರಿ ಎಂಬಂತೆ ಮುಂದೆ ಸಾಗುತ್ತಿದ್ದಾರೆ. ಇದು ಏನೇ ಇರಲಿ.. ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಪದೇ ಪದೇ ವಿರಾಟ್ ಕೊಹ್ಲಿಯನ್ನ ಟಾರ್ಗೆಟ್ ಮಾಡುತ್ತಿದ್ದಾರೆ.
ಸದ್ಯ 2021ರ ಅತ್ಯುತ್ತಮ ಟೆಸ್ಟ್ ತಂಡವನ್ನ ಪ್ರಕಟ ಮಾಡಿರುವ ಆಕಾಶ್ ಚೋಪ್ರಾ, ವಿರಾಟ್ ಕೊಹ್ಲಿಗೇ ಸ್ಥಾನವನ್ನೇ ನೀಡಿಲ್ಲ. ಆಕಾಶ್ ಚೋಪ್ರಾ ತಮ್ಮ ತಂಡದ ನಾಯಕರನ್ನಾಗಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನ ನೇಮಕ ಮಾಡಿಕೊಂಡಿದ್ದಾರೆ.
ಇನ್ನು ಆಕಾಶ್ ತಂಡದಲ್ಲಿ ಶ್ರೀಲಂಕಾ ನಾಯಕ ದಿಮಿತ್ ಕರುಣಾರತ್ನೆ, ಟೀಂ ಇಂಡಿಯಾ ಟಿ20 ನಾಯಕ ರೋಹಿತ್ ಶರ್ಮಾಗೆ ಆರಂಭಿಕರಾಗಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಮೂರನೇ ಮತ್ತು ವಿಲಿಯಮ್ಸನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಫವಾದ್ ಆಲಂ ಐದನೇ ಸ್ಥಾನದ್ದಾರೆ.
ರಿಷಭ್ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿದ್ದರೇ, ಆಲ್ ರೌಂಡರ್ ಕೋಟಾದಲ್ಲಿ ಕೈಲ್ ಜೇಮಿಸನ್, ರವಿಚಂದ್ರನ್ ಅಶ್ವಿನ್ ಇದ್ದಾರೆ.
ಬೌಲರ್‌ಗಳ ಕೋಟಾದಲ್ಲಿ ಅಕ್ಷರ್ ಪಟೇಲ್, ಶಾಹೀನ್ ಅಫ್ರಿದಿ ಮತ್ತು ಜೇಮ್ಸ್ ಆಂಡರ್ಸನ್‌ಗೆ ಅವಕಾಶ ನೀಡಿದ್ದಾರೆ.
ಆದರೆ, ಆಕಾಶ್ ಚೋಪ್ರಾ ಪ್ರಕಟಿಸಿರುವ ತಂಡದಲ್ಲಿ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆದಿಲ್ಲ. ಇದು ವಿರಾಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.