Delhi Municipal Corporation – 134 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಮ್ ಆದ್ಮಿ…
ಡಿಸೆಂಬರ್ 4 ರಂದು ನಡೆಯಲಿರುವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಆಮ್ ಆದ್ಮಿ ಪಕ್ಷ 134 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. 65 ಮಹಿಳಾ ಅಭ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ.
ತಳಮಟ್ಟದಲ್ಲಿ ಕೆಲಸ ಮಾಡುವ ಸ್ವಂ ಸೇವಕರ ಶ್ರಮಕ್ಕೆ ಮೊದಲ ಅಧ್ಯತೆ ನೀಡಲಾಗಿದ್ದು, ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂತಹ ಕಾರ್ಯಕರ್ತರಿಗೆ ಶೇಕಡಾ 90 ರಷ್ಟು ಟಿಕೆಟ್ ನೀಡಲಾಗಿದೆ ಎಂದಿ ಆಪ್ ಪಕ್ಷ ಹೇಳಿದೆ.
ಟಿಕೆಟ್ ನೀಡುವ ಮೊದಲು, ಪಕ್ಷ ಎಲ್ಲಾ ಅಭ್ಯರ್ಥಿಗಳ ಕುರಿತಂತೆ ಸಮೀಕ್ಷೆ ಮಾಡಿ. ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಸ್ಥಳೀಯ ಜನರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಂಡಿತು. ಎಎಪಿ ಟಿಕೆಟ್ನಲ್ಲಿ ಎಂಸಿಡಿ ಚುನಾವಣೆಗೆ ಸ್ಪರ್ಧಿಸಲು 20,000 ಕ್ಕೂ ಹೆಚ್ಚು ಪಕ್ಷದ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದಾರೆ ಎಂದು ಪಕ್ಷ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಅಭ್ಯರ್ಥಿಗಳ ಆಯ್ಕೆಯಲ್ಲಿ, ಆಮ್ ಆದ್ಮಿ ಪಕ್ಷವು (ಎಎಪಿ) ದೆಹಲಿಯ ಜನರ ಜೊತೆ ಗುರುತಿಸಿಕೊಂಡಿರುವ ಅಭ್ಯರ್ಥಿಗಳಿಗೆ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿರುವ ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ” ಎಂದು ಪಕ್ಷವು ಹೇಳಿದೆ.
ಇದಕ್ಕೂ ಮುನ್ನ ಎಂಸಿಡಿ ಚುನಾವಣೆಗೆ ಪಕ್ಷದ 10 ಭರವಸೆಗಳನ್ನು ಕೇಜ್ರಿವಾಲ್ ಬಿಡುಗಡೆ ಮಾಡಿದರು. ಪಕ್ಷದ 30 ಸ್ಟಾರ್ ಪ್ರಚಾರಕರ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಎಂಸಿಡಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ನವೆಂಬರ್ 7 ರಂದು ಪ್ರಾರಂಭವಾಗಿದ್ದು, ನವೆಂಬರ್ 14 ಕೊನೆಯ ದಿನಾಂಕ. ನಾಮಪತ್ರಗಳ ಪರಿಶೀಲನೆಯು ನವೆಂಬರ್ 16 ರಂದು ನಡೆಯಲಿದೆ, ಆದರೆ ಉಮೇದುವಾರಿಕೆಯನ್ನು ಹಿಂಪಡೆಯಲು ನವೆಂಬರ್ 19 ಕೊನೆಯ ದಿನಾಂಕವಾಗಿದೆ.
AAP releases first list of 134 candidates, includes 65 women for Delhi Municipal Corporation polls