Aatmanirbhar Bharat : INS ವಿಶಾಖಪಟ್ಟಣಂ ಹಡಗಿನಿಂದ ಕ್ಷಿಪಣಿ ಪರೀಕ್ಷೆ ಯಶಸ್ವಿ….
ಭಾರತೀಯ ನೌಕಾಪಡೆ ಐಎನ್‌ಎಸ್ ವಿಶಾಖಪಟ್ಟಣಂನಿಂದ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (ಎಂಆರ್‌ಎಸ್‌ಎಎಂ) ಪರೀಕ್ಷಾರ್ಥ ಉಡಾವಣೆಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ಹಡಗು ವಿರೋಧಿ ಕ್ಷಿಪಣಿಗಳ ತೊಡಗಿಸುಕೊಳ್ಳುವಿಕೆಗೆ ಇದು ನೌಕಾಪಡಯ ಸಾಮರ್ಥ್ಯವನ್ನ ಹೆಚ್ಚಿಸಿದೆ.
ಪ್ರಮುಖ ಹಡಗು ಐಎನ್ಎಸ್ ವಿಶಾಖಪಟ್ಟಣಂನಿಂದ ಕ್ಷಿಪಣಿಯನ್ನ ಹಾರಿಸಲಾಸಗಿದೆ. DRDO ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ MRSAM ಅನ್ನು ಭಾರತೀಯ ಸೇನೆಯ ಬಳಕೆಗಾಗಿ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ನಲ್ಲಿ ಉತ್ಪಾದಿಸಲಾಗುತ್ತದೆ.
#IndianNavy successfully undertook MRSAM firing from #INSVisakhapatnam validating capability to engage Anti Ship Missiles.
MRSAM jointly developed by @DRDO_India & #IAI, & produced at #BDL reflects #IndianNavy‘s commitment to #AatmaNirbharBharat.@DefenceMinIndia @PMOIndia pic.twitter.com/I8LwCV2WWH— SpokespersonNavy (@indiannavy) March 7, 2023
ಕ್ಷಿಪಣಿ ಪರೀಕ್ಷೆಯ ವಿವರಗಳನ್ನ ಹಂಚಿಕೊಂಡಿರುವ ಭಾರತೀಯ ನೌಕಾಪಡೆ “DRDO ಮತ್ತು IAI ಜಂಟಿಯಾಗಿ ಅಭಿವೃದ್ಧಿಪಡಿಸಿದ MRSAM ಮತ್ತು BDL ನಲ್ಲಿ ತಯಾರಿಸಲಾದ ಆತ್ಮ ನಿರ್ಭರ ಭಾರತಕ್ಕೆ ಭಾರತೀಯ ನೌಕಾಪಡೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.” ಎಂದು ಟ್ವೀಟ್ ಮಾಡಿದೆ.
Aatmanirbhar Bharat : Indian Navy successfully undertook MRSAM firing from INS Visakhapatnam