AB-de-villiers | ಐಪಿಎಲ್ ಗೆ ರೀ ಎಂಟ್ರಿ ಬಗ್ಗೆ ಎಬಿಡಿ ಸ್ಪಷ್ಟನೆ..!!
ಇಂಡಿಯನ್ ಪ್ರಿಮಿಯರ್ ಲೀಗ್ ಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಮಿಸ್ಟರ್ 360 ಡಿಗ್ರಿ ಪ್ಲೇಯರ್ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕ್ರಿಕೆಟ್ ಜಗತ್ತಿನಲ್ಲಿ ಗಿರಗಿಟ್ಟಲೇ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಎಬಿಡಿ ವಿಲಿಯರ್ಸ್ ರೀ ಎಂಟ್ರಿ ಬಗ್ಗೆ ಕ್ಲೂ ಕೊಟ್ಟಿದ್ದಾರೆ. ಹೀಗಾಗಿ ಎ ಬಿ ಡಿವಿಲಿಯರ್ಸ್ ರೀ ಎಂಟ್ರಿ ಬಗ್ಗೆ ಆರ್ ಸಿಬಿ ಅಭಿಮಾನಿಗಳು ಸಾಕಷ್ಟು ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.
ಇದೀಗ ತಮ್ಮ ರೀ ಎಂಟ್ರಿ ಬಗ್ಗೆ ಸ್ವತಃ ಎ ಬಿ ಡೆವಿಲಿಯರ್ಸ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಡೆವಿಲಿಯರ್ಸ್, ಮುಂಬರುವ ಸೀಸನ್ ನಿಂದ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಲಿದ್ದೇನೆ. ನನ್ನ ನೆಚ್ಚಿನ ತಂಡವಾದ ಆರ್ ಸಿಬಿ ಜೊತೆ ನನ್ನ ಸಂಬಂಧ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದ್ರೆ ಅವರು ತಂಡದಲ್ಲಿ ಆಟಗಾರನಾಗಿ ಎಂಟ್ರಿ ಕೊಡುತ್ತಾರೋ ಅಥವಾ ತಂಡ ಸಿಬ್ಬಂದಿಯಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸೇರುತ್ತಾರಾ ಎಂಬುದರ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟನೆ ದೊರಕಿಲ್ಲ.
ಆದಾಗ್ಯೂ ಎ ಬಿ ಡೆವಿಲಿಯರ್ಸ್ ಅವರಿಗೆ ಸದ್ಯ 38 ವರ್ಷ. ಮುಂದಿನ ಆವೃತ್ತಿಯ ಐಪಿಎಲ್ ಶುರುವಾಗುವಷ್ಟರಲ್ಲಿ ಅವರಿಗೆ 39 ವರ್ಷ ವಯಸ್ಸಾಗಿರುತ್ತದೆ.
ಈ ಆಧಾರದಲ್ಲಿ ನೋಡೋದಾದ್ರೆ ಎ ಬಿ ಡಿ ವಿಲಿಯರ್ಸ್ ತಂಡದ ಆಟಗಾರನಾಗಿ ಕಣಕ್ಕಿಳಿಯುವುದು ನೂರಕ್ಕೆ ನೂರರಷ್ಟು ಅನುಮಾನ.
ಯುವಕರಿಗೆ ಅವಕಾಶ ನೀಡುವ ಉದ್ದೇಶದಿಂದ ಮತ್ತು ತಂಡದ ಭವಿಷ್ಯದ ದೃಷ್ಠಿಯಿಂದ ಎಬಿಡಿ ಮತ್ತೆ ಆಟಗಾರನಾಗಿ ಕಣಕ್ಕೆ ಇಳಿಯುವುದಿಲ್ಲ.
ಇದನ್ನ ಬಿಟ್ಟರೇ ಅವರು ಆರ್ ಸಿಬಿ ತಂಡ ಮೆಂಟರ್ ಆಗುವ ಸಾಧ್ಯತೆಗಳಿವೆ. ಈ ಹಿಂದೆ ಆರ್ ಸಿಬಿಯ ಕೋಚ್ ಸಂಜಯ್ ಬಂಗಾರ್ ಹೇಳಿದಂತೆ ಎಬಿಡಿ ವಿಲಿಯರ್ಸ್ ಅವರಂತಹ ಆಟಗಾರರು ತಂಡದ ಭಾಗವಾದರೇ ಯುವಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಜೊತೆಗೆ ಅವರ ಅನುಭವ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದಿದ್ದರು.
ಈ ಹಿನ್ನೆಲೆಯಲ್ಲಿ ನೋಡೋದಾದ್ರೆ ಎಬಿಡಿ ಆರ್ ಸಿಬಿಯ ಮೆಂಟರ್ ಅಥವಾ ಬ್ಯಾಟಿಂಗ್ ಕೋಚ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಸುದ್ದಿ ಆರ್ ಸಿಬಿ ಅಭಿಮಾನಿಗಳಿಗೆ ಸೂಪರ್ ಕಿಕ್ ಕೊಟ್ಟಿದೆ. ರೆಂಡ್ ಅಂಡ್ ಗೋಲ್ಡ್ ಜರ್ಸಿಯಲ್ಲಿ ಎ ಬಿ ಡಿ ವಿಲಿಯರ್ಸ್ ಅವರನ್ನ ನೋಡಲು ಆರ್ ಸಿಬಿಯನ್ಸ್ ಕಾಯುತ್ತಿದ್ದಾರೆ.
2018ರಲ್ಲಿ ಅಂತರರಾಷ್ಟ್ರೀಯಕ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದ ಎಬಿಡಿ ವಿಲಿಯರ್ಸ್ ಕಳೆದ ವರ್ಷ ಐಪಿಎಲ್ ಗೂ ವಿದಾಯ ಘೋಷಿಸಿದರು. 2011ರಲ್ಲಿ ಆರ್ ಸಿಬಿ ಪಾಳಯ ಸೇರಿಕೊಂಡ ಎ ಬಿಡಿ ವಿಲಿಯರ್ಸ್ ಬರೋಬ್ಬರಿ 11 ವರ್ಷಗಳ ಕಾಲ ರೆಡ್ ಅಂಡ್ ಗೋಲ್ಡ್ ನ ಭಾಗವಾಗಿದ್ದರು.
ಆರ್ ಸಿಬಿ ತಂಡ ಪರ 156 ಪಂದ್ಯಗಳನ್ನಾಡಿರುವ ಡಿವಿಲಿಯರ್ಸ್ ಎರಡು ಶತಕ, 37 ಅರ್ಧಶತಕಗಳೊಂದಿಗೆ 4491 ರನ್ ಗಳಿಸಿದ್ದಾರೆ.
ಒಟ್ಟಾರೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ 184 ಪಂದ್ಯಗಳಾಡಿರುವ ಎ ಬಿ ಡಿ ವಿಲಿಯರ್ಸ್ ಮೂರು ಸೆಂಚೂರಿ, 40 ಅರ್ಧಶತಕಗಳು ಸೇರಿದಂತೆ 5162 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 151.7 ಇದೆ. ab-de-villiers-confirms-his-return-ipl