ಐಪಿಎಲ್ ಸಂಭಾವನೆಯಲ್ಲಿ 100 ಕೋಟಿ ಗಳಿಸಿದ ಮೊದಲ ವಿದೇಶಿ ಆಟಗಾರ ಎಬಿಡಿ
ಐಪಿಎಲ್ ಫ್ರಾಂಚೈಸಿಗಳು 2021ರ ಸೀಸನ್ ಗೆ ತಾವು ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ.
ಆರ್ ಸಿಬಿ ತನ್ನ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಾಲ್, ವಾಷಿಂಗ್ಟನ್ ಸುಂದರ್ ಮುಂತಾದವರನ್ನು ಉಳಿಸಿಕೊಂಡಿದೆ.
ಎಬಿಡಿ ವಿಲಿಯರ್ಸ್ ಆರ್ ಸಿಬಿ ತಂಡದಲ್ಲೇ ಉಳಿದುಕೊಂಡಿರುವ ಕಾರಣ ಐಪಿಎಲ್ ಲೀಗ್ ಇತಿಹಾಸದಲ್ಲಿ 100 ಕೋಟಿ ರೂ. ಗಳಿಸಿದ ಅಗ್ರ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ವರದಿಯಾಗಿದೆ.
ಈಗಾಗಲೇ ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ ನೂರು ಕೋಟಿ ಕ್ಲಬ್ ನಲ್ಲಿದ್ದರು. ಇದೀಗ ಈ ಪಟ್ಟಿಗೆ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್ ಮನ್ ಎಂಟ್ರಿ ಕೊಟ್ಟಿದ್ದಾರೆ.
ಡಿ ವಿಲಿಯರ್ಸ್ ಅವರ ಪ್ರಸ್ತುತ ಒಪ್ಪಂದವು ಒಂದು ಸೀಸನ್ ಗೆ 11 ಕೋಟಿ ರೂಪಾಯಿ ಇದ್ದು, 2021ರ ಐಪಿಎಲ್ ಒಪ್ಪಂದದೊಂದಿಗೆ, ಡಿವಿಲಿಯರ್ಸ್ ಫ್ರಾಂಚೈಸಿಗಳಿಂದ ಪಡೆದ ಒಟ್ಟು ಸಂಭಾವನೆ 102.5 ಕೋಟಿ ರೂ. ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel