Cooker bomb
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರೋಪಿ ಶಾರೀಕ್ಗೂ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಗೂ ನಂಟಿರುವುದು ತನಿಖೆಯಿಂದ ತಿಳಿದು ಬಂದಿದೆ.
ತೀರ್ಥಹಳ್ಳಿಯ ಅಬ್ದುಲ್ ಮತೀನ್ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಮೈನ್ ಹ್ಯಾಂಡ್ಲರ್ ಆಗಿದ್ದು, ಆತ ಎರಡು ವರ್ಷಗಳ ಹಿಂದೆ ಉಗ್ರ ಕೃತ್ಯವೆಸಗಲು ಸಂಚು ರೂಪಿಸಿದ್ದ ಪ್ರಕರಣದ ಆರೋಪಿಯಾಗಿದ್ದಾನೆ.
ಅಬ್ದುಲ್ ಮತೀನ್ ಶಿವಮೊಗ್ಗದ ತೀರ್ಥಹಳ್ಳಿಯವನಾಗಿದ್ದು, ವಿದೇಶಿ ಭಯೋತ್ಪಾದಕ ಸಂಘಟನೆಯ ಜೊತೆ ಸಂಬಂಧ ಹೊಂದಿರುವುದು ತನಿಖೆಯಿಂದ ತಿಳಿದಿತ್ತು. ಆತನ ಮೇಲೆ ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಐಸಿಸ್ ಹಾಗೂ ಸಿಮಿ ಸಂಘಟನೆಗಳಲ್ಲಿ ತೊಡಗಿಕೊಂಡು ಉಗ್ರ ಕೃತ್ಯವೆಸಗಲು ಸಂಚು ರೂಪಿಸಿದ್ದ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡಿರುವ ಅಬ್ದುಲ್ ಮತೀನ್ ಜೊತೆ ಶಾರೀಕ್ ಸಂಪರ್ಕದಲ್ಲಿದ್ದ ಮತ್ತು ಆತನ ಸೂಚನೆಯ ಮೇರೆಗೆ ಶಾರೀಕ್ ಕೆಲಸ ಮಾಡುತ್ತಿದ್ದನೆಂದು ವರದಿಗಳು ತಿಳಿಸಿದೆ.
ತಲೆಮರೆಸಿಕೊಂಡಿರುವ ಅಬ್ದುಲ್ ಮತೀನ್ ಬಗ್ಗೆ ಮಾಹಿತಿ ನೀಡುವವರಿಗೆ, ಎನ್ಐಎ ಎರಡು ಲಕ್ಷ ರೂಪಾಯಿ ರಿವಾರ್ಡ್ ನೀಡುವುದಾಗಿ ಘೋಷಣೆ ಮಾಡಿದೆ.