Abhishek Bachchan: ಪ್ಯಾನ್ ಇಂಡಿಯಾ ಪದದ ಮೇಲೆ ನಂಬಿಕೆ ಇಲ್ಲ
ನಟ ಅಭಿಷೇಕ್ ಬಚ್ಚನ್ ನಟನೆಯ ‘ದಸ್ವಿ’ ಚಿತ್ರ ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆಗಿದ್ದು, ನೋಡುಗರ ಮೆಚ್ಚುಗೆ ಪಡೆದುಕೊಂಡಿದೆ. ಆದ್ರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪ್ಯಾನ್ ಇಂಡಿಯಾ ಎಂಬ ಪದದಲ್ಲಿ ನನಗೆ ನಂಬಿಕೆ ಇಲ್ಲ ಎಂದಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ಕಂಟೆಂಟ್ ಇರುವುದಿಲ್ಲ ಅನ್ನೋದನ್ನ ನಾನು ತಿರಸ್ಕರಿಸುತ್ತೇನೆ. ಪ್ರತಿ ನಟನೂ ಭಾರತೀಯ ಚಿತ್ರರಂಗದ ಭಾಗವೇ ಎಂದಿದ್ದಾರೆ.
‘ನನಗೆ ಪ್ಯಾನ್ ಇಂಡಿಯಾ ಪದದಲ್ಲಿ ನಂಬಿಕೆ ಇಲ್ಲ. ನಾವು ಈ ಪದವನ್ನು ಬೇರೆ ಯಾವುದೇ ಉದ್ಯಮಕ್ಕೆ ಬಳಸುತ್ತೇವೆಯೇ? ಇಲ್ಲ ಅಲ್ಲವೇ. ಕೆಜಿಎಫ್ 2, ಪುಷ್ಪ, ಆರ್ ಆರ್ ಆರ್ ಚಿತ್ರಗಳು ಹಿಂದಿಯಲ್ಲಿ ಚೆನ್ನಾಗಿ ಕಲೆಕ್ಷನ್ ಮಾಡಿವೆ.

ಒಳ್ಳೆಯ ಸಿನಿಮಾ ಹಿಟ್ ಆಗುತ್ತದೆ. ಫ್ಲಾಪ್ ಸಿನಿಮಾ ಎಲ್ಲಾದ್ರೂ ಫ್ಲಾಪ್ ಆಗುತ್ತದೆ. ಬಾಲಿವುಡ್ ನಲ್ಲಿ ಒಳ್ಳೆಯ ಕಂಟೆಂಟ್ ಸಿನಿಮಾಗಳಿಲ್ಲ ಎನ್ನುವುದು ಸರಿಯಲ್ಲ.
ಗಂಗೂಬಾಯಿ ಕಟಿಯವಾಡಿ ಮತ್ತು ಸೂರ್ಯವಂಶಿ ಉತ್ತಮ ಹಿಟ್ ಗಳಿಸಿವೆ. ಇನ್ನು ರಿಮೇಕ್ ಯಾವಾಗಲೂ ನಡೆಯುತ್ತಿರುತ್ತದೆ.
ಇದು ಕೇವಲ ಒಂದು ಆಯ್ಕೆಯಾಗಿದೆ. ನಮ್ಮಲ್ಲಿ ಸಾಕಷ್ಟು ಸಿನಿಮಾ ಪ್ರೇಮಿಗಳಿದ್ದಾರೆ. ಸಿನಿಮಾಗೆ ಭಾಷೆಯ ಗಡಿ ಇರಲ್ಲ.
ಸಿನಿಮಾ ಯಾವುದೇ ಭಾಷೆಯಲ್ಲಿ ಬಂದರೂ ಅದು ಸಿನಿಮಾನೇ. ನಾವು ವಿವಿಧ ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದರೂ, ನಾವೆಲ್ಲರೂ ಭಾರತೀಯ ಚಲನಚಿತ್ರೋದ್ಯಮದ ಭಾಗವಾಗಿದ್ದೇವೆ. ನಾವೆಲ್ಲರೂ ದೊಡ್ಡ ಕುಟುಂಬಕ್ಕೆ ಸೇರಿದವರೇ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.
abhishek-bachchan-about pan-india-movies