ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ  ಕ್ಲಾಸಿ ರಿಪ್ಲೈ  !

1 min read
Abhishek bachchan

ಸುಂದರ ಪತ್ನಿ ಇರುವ ಗುಡ್ ಫಾರ್ ನಥಿಂಗ್ ವ್ಯಕ್ತಿ ಎಂಬ ಟ್ರೋಲ್ ಗೆ ಅಭಿಷೇಕ್ ಬಚ್ಚನ್ ನಿಂದ  ಕ್ಲಾಸಿ ರಿಪ್ಲೈ  !

ನಟ ಅಭಿಷೇಕ್ ಬಚ್ಚನ್ ತಮ್ಮ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಟ್ವಿಟರ್ ಟ್ರೋಲ್‌ಗೆ ಪ್ರತಿಕ್ರಿಯಿಸಿದ್ದಾರೆ. ಅಭಿಷೇಕ್ ಸೋಷಿಯಲ್ ಮೀಡಿಯಾದಲ್ಲಿ ವಿರೋಧಿಗಳಿಗೆ ಪ್ರತಿಕ್ರಿಯಿಸುವುದು, ಅವರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.
Abhishek bachchan

ಅಭಿಷೇಕ್ ಅವರ ಮುಂಬರುವ ಚಿತ್ರ ದಿ ಬಿಗ್ ಬುಲ್ ಚಿತ್ರದ ಟ್ರೇಲರ್ ಗೆ ಪ್ರತಿಕ್ರಿಯೆಯಾಗಿ ಒಬ್ಬ ವ್ಯಕ್ತಿಯು ನಟನನ್ನು ‘ಗುಡ್ ಫಾರ್ ನಥಿಂಗ್’ ಎಂದು ಕರೆದಿದ್ದಾರೆ. ಅವರು ಅಭಿಷೇಕ್ ಬಗ್ಗೆ ಅಸೂಯೆ ಪಟ್ಟ ಒಂದೇ ಕಾರಣವೆಂದರೆ  ‘ಸುಂದರವಾದ  ಪತ್ನಿ’ ಇರುವುದು ಎಂದು ಆ ವ್ಯಕ್ತಿ ಬರೆದಿದ್ದಾರೆ.

ಅಭಿಷೇಕ್ ತನ್ನ ಪ್ರತಿಕ್ರಿಯೆಯಲ್ಲಿ, “ಸರಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.  ಕುತೂಹಲಕ್ಕೆ ಕೇಳುತ್ತಿದ್ದೇನೆ .. ನೀವು ಬಹಳಷ್ಟು ಜನರನ್ನು ಟ್ಯಾಗ್  ಮಾಡಿರುವ ಕಾರಣ ನೀವು ಯಾರನ್ನು ಉಲ್ಲೇಖಿಸುತ್ತಿದ್ದೀರಿ?
ಇಲಿಯಾನಾ ಮತ್ತು ನಿಕಿ ಮದುವೆಯಾಗಿಲ್ಲ ಎಂದು ನನಗೆ ತಿಳಿದಿದೆ, ಆದರೆ ಉಳಿದವರು (ಅಜಯ್, ಕುಕಿ, ಸೊಹುಮ್) ಡಿಸ್ನಿಪ್ಲಸ್ ಎಚ್‌ಎಸ್‌ವಿಐಪಿ  ವೈವಾಹಿಕ ಸ್ಥಿತಿಯ ಬಗ್ಗೆ ತಿಳಿದು ನಿಮಗೆ ಹೇಳುತ್ತೇನೆ ಎಂದು ಅಭಿಷೇಕ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ, ಅಭಿಷೇಕ್ ಟ್ರೋಲ್ ಗೆ ಇದೇ ಮಾದರಿಯಲ್ಲಿ ಪ್ರತಿಕ್ರಿಯಿಸಿದ್ದರು.‌ ನಿಮಗೆ ಅಮಿತಾಭ್ ಬಚ್ಚನ್ ಮಗನಾಗಿರುವ ಕಾರಣದಿಂದ ಮಾತ್ರವೇ ಕೆಲಸ ಸಿಗುತ್ತಿದೆ ಎಂದು ಅನಿಸುತ್ತಿಲ್ಲವೇ ಎಂದು ಒಬ್ಬ ವ್ಯಕ್ತಿ ಕೇಳಿದ್ದರು.‌ ಅದಕ್ಕೆ ಅಭಿಷೇಕ್, ಕಾಶ್ ಜೋ ಆಪ್ ಕೆಹ್ ರಹೇ ಹೋಟೆ ಸಾಚ್ ಹೋಟಾ. ಸೋಚಿಯೆ, ಕಿಟ್ನಾ ಕಾಮ್ ಮಿಲ್ಟಾ ಮುಜೆ. (ನೀವು ಹೇಳುತ್ತಿರುವುದು ನಿಜವಾಗಿರುತ್ತಿದ್ದರೆ ಎಂದು ನಾನು ಬಯಸುತ್ತೇನೆ. ಯೋಚಿಸಿ ನನಗೆ ಆಗ ಎಷ್ಟು ಕೆಲಸ ಸಿಗುತ್ತಿತ್ತು) ಎಂದು ಪ್ರತಿಕ್ರಿಯಿಸಿದ್ದರು.
Abhishek bachchan

ಅಭಿಷೇಕ್ ಎಂಬ ಹೆಸರಿನ ಇನ್ನೊಬ್ಬ ವ್ಯಕ್ತಿ ಅಭಿಷೇಕ್ ಗೆ   ಮೊದಲ ಚಿತ್ರ ರೆಪ್ಯೂಜಿ ಸಿಕ್ಕಿರುವುದು ಅವರು ‘ನೆಪೋಕಿಡ್’ ಆಗಿದ್ದರಿಂದ ಎಂದಾಗ ಅರೆ ಯಾರ್, ಯೆ ಸಾರೆ ದುನಿಯಾ ಕೆ ಅಭಿಷೇಕ್ ಮೆರೆ ಪೀಚೆ ಕ್ಯೂ ಪಾಡ್ ಗಯೆ ಹೈ. ಬಕ್ಷ್ ದೋ ಮಹಾರಾಜ್, ಚುಪ್ ಚಾಪ್ ಅಪ್ನಾ ಕಾಮ್ ಕರ್ ರಾಹಾ ಹು (ಓಹ್, ಪ್ರಪಂಚದ ಎಲ್ಲ ಅಭಿಷೇಕ್ ಗಳು ನನ್ನ ಮೇಲೆ ಏಕೆ ಆಕ್ರಮಣ ಮಾಡಲು ಪ್ರಾರಂಭಿಸಿದ್ದಾರೆ. ಕರುಣೆ ತೋರಿ, ನಾನು ನನ್ನ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇನೆ) ಎಂದು ಪ್ರತಿಕ್ರಿಯೆ ನೀಡಿದ್ದರು.

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd