ಅಮಿತಾಭ್ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಗೂ ಕೊರೋನಾ ಸೋಂಕು
ಮುಂಬೈ, ಜುಲೈ 12: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಮಗ ಅಭಿಷೇಕ್ ಬಚ್ಚನ್ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇವರಿಬ್ಬರ ಸ್ವಾಬ್ ಟೆಸ್ಟ್ನಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಮುಂಬೈ ನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಮಿತಾಭ್ ಬಚ್ಚನ್ ಅವರು ಈ ಮೊದಲು ಟ್ವೀಟ್ ಮಾಡಿ, ಕೊರೊನಾ ಸೋಂಕು ತಗುಲಿರುವುದನ್ನು ಖಚಿತ ಪಡಿಸಿದ್ದರು.. ಅಲ್ಲದೇ ತನ್ನ ಸಂಪರ್ಕಕ್ಕೆ ಬಂದಿರುವ ಯಾವುದೇ ವ್ಯಕ್ತಿಯಾದರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದರು. ನನ್ನ ಸಂಪರ್ಕಕ್ಕೆ ಬಂದಿರುವ ತನ್ನ ಕುಟುಂಬ ವರ್ಗ ಮತ್ತು ಸಿಬ್ಬಂದಿಗಳು ಕೂಡ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು, ಅವರ ಫಲಿತಾಂಶಕ್ಕಾಗಿ ಕಾಯುತ್ತಿರುವುದಾಗಿ ಬಿಗ್ ಬಿ ಹೇಳಿಕೊಂಡಿದ್ದರು.
ಇದೀಗ ಅವರ ಪುತ್ರ ಅಭಿಷೇಕ್ ಬಚ್ಚನ್ ಗೂ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಮಿತಾಬ್ ಬಚ್ಚನ್ ತಮ್ಮ ಜಲ್ಸಾ ಬಂಗಲೆಯಲ್ಲಿ ಪತ್ನಿ ಜಯ, ಅಭಿಷೇಕ್, ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಅವರೊಂದಿಗೆ ಇದ್ದಾರೆ. ಅವರ ಮಗಳು ಶ್ವೇತಾ ಮತ್ತು ಅವರ ಮಕ್ಕಳಾದ ನವ್ಯಾ ಮತ್ತು ಅಗಸ್ತ್ಯ ಕೂಡ ಪ್ರಸ್ತುತ ಮುಂಬೈನಲ್ಲಿದ್ದಾರೆ.