ನವದೆಹಲಿ: ದೇಶದಲ್ಲಿ ಈಗ ಎಲ್ಲರ ಚಿತ್ತ ಫಲಿತಾಂಶದತ್ತ ಎನ್ನುವಂತಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಎಕ್ಸಿಟ್ ಪೋಲ್ ಹೊರ ಬಿದ್ದಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಲಿದೆ ಎಂದು ಹೇಳಿವೆ. ಈ ಮಧ್ಯೆ ಚಾಣ್ಯಕ್ಯ ಈ ಬಾರಿ 400ರ ಗಡಿ ದಾಟಲಿದೆ ಎಂದು ಹೇಳಿದೆ.
ಅಬ್ಕಿ ಬಾರ್, ಚಾರ್ ಸೌ ಪಾರ್’ ಕನಸು ನನಸಾಗುತ್ತದೆ ಎಂದು ಟುಡೇಸ್ ಚಾಣಕ್ಯ (Today’s Chanakya) ಹೇಳಿದೆ. ಚಾಣಕ್ಯ ಸಮೀಕ್ಷೆಯಂತೆ ಬಿಜೆಪಿ 335 ± 15, ಎನ್‌ಡಿಎ 400 ± 15, ಕಾಂಗ್ರೆಸ್ 50 ± 11, INDIA 107 ± 11, ಇತರರು 36 ± 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಹೇಳಿದೆ.
2009, 2014, 2019 ಲೋಕಸಭಾ ಚುನಾವಣೆಯ (Lok Sabha Election) ಸಂದರ್ಭದಲ್ಲಿ ಟುಡೇಸ್ ಚಾಣಕ್ಯ ಬಹುತೇಕ ನಿಖರ ಭವಿಷ್ಯ ನುಡಿದಿತ್ತು. 2014ರ ಚುನಾವಣೆಯಲ್ಲಿ ಎನ್‌ಡಿಎ 340 ಸ್ಥಾನಗಳನ್ನು ಗೆಲ್ಲಲಿದೆ ಎಂದು ಚಾಣಕ್ಯ ಭವಿಷ್ಯ ನುಡಿದಿತ್ತು. ಫಲಿತಾಂಶದಲ್ಲಿ ಬಿಜೆಪಿ 282, ಎನ್‌ಡಿಎ 336 ಸ್ಥಾನಗಳನ್ನು ಗೆದ್ದಿದ್ದವು.
2019 ರ ಚುನಾವಣೆಯಲ್ಲಿ ಎನ್‌ಡಿಎಗೆ 340 ಸ್ಥಾನ ಸಿಗಬಹುದು ಎಂದು ಟುಡೇಸ್ ಚಾಣಕ್ಯ ಭವಿಷ್ಯ ನುಡಿದಿತ್ತು. ಅಂತಿಮ ಫಲಿತಾಂಶದಲ್ಲಿ ಬಿಜೆಪಿ 303, ಎನ್‌ಡಿಎ 352 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು.