ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ರಾಕೆಟ್ ವೇಗದಲ್ಲಿ ಏರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ಆರಂಭವಾಗಿದ್ದು, ಈ ಬಗ್ಗೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ತಜ್ಞರ ವರದಿ ಆಧರಿಸಿ ಸರ್ಕಾರ ಲಾಕ್ ಡೌನ್ ಮಾಡ್ಬೇಕಾ ಬೇಡವೇ ಅನ್ನೋ ನಿರ್ಣಯ ತೆಗೆದುಕೊಳ್ತೇವೆ. ಈ ಹಿಂದೆ 70 ದಿನ ಲಾಕ್ ಡೌನ್ ಆಗಿತ್ತು. ಕೊರೊನಾ ಹೋಯ್ತಾ..? ಹೋಗಲಿಲ್ಲ, ಯಾರಾದರೂ ಹರಡಿಸ್ತಾನೇ ಇರ್ತಾರೆ ಎಂದ ಸಿ.ಟಿ ರವಿ, ಕೊರೊನಾಗೆ ಲಾಕ್ ಡೌನ್ ಪರಿಹಾರವಾ.? ಎಂಬುದನ್ನು ಚರ್ಚೆ ಮಾಡುತ್ತೇವೆ. ಅದಕ್ಕೆ ತಜ್ಞರ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ