ಬೆಳ್ಳಂಬೆಳ್ಳಗೆ ರಾಜ್ಯದ ಹಲವೆಡೆ ಎಸಿಬಿ ದಾಳಿ – Saaksha Tv
ಬೆಂಗಳೂರು: ಇಂದು ಬೆಳ್ಳಂಬೆಳ್ಳಗೆ ರಾಜ್ಯದ 18 ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ 75 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ದಾಳಿಗೆ ಸಾರಿಗೆ ಇಲಾಖೆಯ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ವಿವಿಧ ಇಲಾಖೆಯ ಕಾರ್ಯನಿರ್ವಹಿಸುತ್ತಿರುವ 18 ಮಂದಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತರು, ರಸ್ತೆ ಹಾಗೂ ಸಾರಿಗೆ ಸುರಕ್ಷತೆ, ಬೆಂಗಳೂರು, ರಾಕೇಶ್ ಕುಮಾರ್, ಬಿಡಿಎ, ನಗರ ಯೋಜನೆ ರಮೇಶದ ಕಣಕಟ್ಟೆ, ಆರ್ ಎಫ್ಐ, ಅರಣ್ಯ ಇಲಾಖೆ, ಯಾದಗಿರಿ ದಾಳಿಗೆ ಒಳಗಾಗಿದ್ದಾರೆ.
ಅಲ್ಲದೆ ಬಸವರಾಜ ಶೇಖರ್ ರೆಡ್ಡಿ ಪಾಟೀಲ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಕೌಜಲಗಿ ವಿಭಾಗ, ಗೋಕಾಕ್ , ಬಸವ ಕುಮಾರ್ ಎಸ್. ಅಣ್ಣಿಗೇರಿ, ಶಿರಸ್ತೇದಾರ್ ಜಿಲ್ಲಾಧಿಕಾರಿ ಕಚೇರಿ, ಗದಗ, ಗೋಪಿನಾಥ್ ಎನ್.ಮಲಗ, ಯೋಜನಾ ವ್ಯವಸ್ಥಾಪಕ, ನಿರ್ಮಿತಿ ಕೇಂದ್ರ, ವಿಜಯಪುರ, ಬಿ.ಕೆ.ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ, ಬೆಂಗಳೂರು ಮತ್ತು ಶಿವಾನಂದ ಪಿ.ಶರಣಪ್ಪ, ಆರ್ ಎಫ್ಓ, ಬಾದಾಮಿ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಿದ್ದಾರೆ.
ಹಾಗೇ ಮಂಜುನಾಥ್, ಅಸ್ಟಿಸೆಂಟ್ ಕಮೀಷನರ್, ರಾಮನಗರ, ಶ್ರೀನಿವಾಸ್, ಜನರಲ್ ಮ್ಯಾನೇಜರ್, ಸಮಾಜ ಕಲಾಣ್ಯ ಇಲಾಖೆ, ಮಹೇಶ್ವರಪ್ಪ, ಪರಿಸರ ಅಧಿಕಾರಿ, ದಾವಣಗೆರೆ , ಕೃಷ್ಣನ್, ಎಇ, ಎಪಿಎಂಸಿ, ಹಾವೇರಿ, ಚೆಲುವರಾಜ್, ಅಬಕಾರಿ ಇನ್ ಸ್ಪೆಕ್ಟರ್, ಗುಂಡ್ಲುಪೇಟೆ, ಗಿರೀಶ್, ಅಸ್ಟಿಸೆಂಟ್ ಇಂಜಿನಿಯರ್, ನ್ಯಾಷನಲ್ ಹೈವೈ ಸಬ್ ಡಿವಿಷನ್, ಎಚ್.ಎನ್.ಬಾಲಕೃಷ್ಣ, ಪೊಲೀಸ್ ಇನ್ ಸ್ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು, ಗವಿರಂಗಪ್ಪ, ಎಇಇ, ಲೋಕೋಪಯೋಗಿ ಇಲಾಖೆ, ಚಿಕ್ಕಮಗಳೂರು, ಅಶೋಕ್ ರೆಡ್ಡಿ ಪಾಟೀಲ್, ಎಇಇ, ಕೃಷ್ಣಭಾಗ್ಯ ಜಲನಿಗಮ, ದೇವದುರ್ಗ, ರಾಯಚೂರು ಮತ್ತು ದಯಾಸುಂದರ್ ರಾಜ, ಎಇಇ, ಕೆಪಿಟಿಸಿಎಲ್, ದಕ್ಷಿಣ ಕನ್ನಡ ದಾಳಿಗೆ ಒಳಗಾಗಿದ್ದಾರೆ.