ADVERTISEMENT
Tuesday, February 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

`ಸುಧಾ ಗೋಲ್ಡ್ ಖಜಾನೆ’ಯಲ್ಲಿ ಕೆಜಿಗಟ್ಟಲೇ ಚಿನ್ನ, ನಗದು, ಕೋಟ್ಯಂತರ ಆಸ್ತಿಪಾಸ್ತಿ ಪತ್ತೆ..!

Kariyappa N by Kariyappa N
November 7, 2020
in Newsbeat, Politics, Samagra karnataka, ರಾಜ್ಯ
acb raid
Share on FacebookShare on TwitterShare on WhatsappShare on Telegram

ಬೆಂಗಳೂರು: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಡಿಎ ಭೂಸ್ವಾಧೀನ ಅಧಿಕಾರಿ ಡಾ.ಬಿ.ಸುಧಾ ಅವರ ಮನೆ, ಕಚೇರಿಗಳ ಮೇಲೆ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೊಡಿಗೇನಹಳ್ಳಿ, ಯಲಹಂಕದಲ್ಲಿರುವ ಮನೆ, ಉಡುಪಿಯ ಹೆಬ್ರಿ, ಮೈಸೂರಿನಲ್ಲಿರುವ ಡಾ. ಸುಧಾ ಅವರ ಮನೆ ಮತ್ತು ಸಂಬಂಧಿಕರ ಮನೆ ಸೇರಿದಂತೆ 6 ಕಡೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

acb raid-2
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿರುವ ಸುಧಾ ಅವರ ಭವ್ಯ ಬಂಗಲೆಯಲ್ಲಿ ಎಸಿಬಿ ಪರಿಶೀಲನೆ ಮುಂದುವರೆದಿದ್ದು, ಈ ವೇಳೆ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ಸುಮಾರು ಹತ್ತು ಲಕ್ಷ ನಗದು, ಹಲವು ಆಸ್ತಿ ಪತ್ರಗಳು ಪತ್ತೆಯಾಗಿವೆ.ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ.ಬಿ ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು.
ಪ್ರಸ್ತುತ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಆಡಳಿತ ಅಧಿಕಾರಿ ಆಗಿರುವ ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಕೊಡಿಗೇಹಳ್ಳಿ ನಿವಾಸ, ಯಲಹಂಕದಲ್ಲಿ ಒಂದು ಫ್ಲ್ಯಾಟ್, ಬ್ಯಾಟರಾಯನಪುರ ಹಾಗೂ ಬಿಇಎಂಎಲ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ, ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿರುವ ಮನೆ ಮೇಲೂ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

Related posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

February 17, 2026
KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

February 17, 2026

sudha, kas officer
ಎಸಿಬಿ ಡಿವೈಎಸ್ಪಿ ಪ್ರತಾಪ್ ರೆಡ್ಡಿ ಮತ್ತು ತಂಡದಿಂದ ಡಾ. ಸುಧಾ ಅವರ ಮನೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.  ಈ ಹಿಂದೆ ಸೊರಬದಲ್ಲಿ ತಹಶೀಲ್ದಾರ್ ಆಗಿದ್ದ ಡಾ. ಸುಧಾ ಶಿವಮೊಗ್ಗದಲ್ಲೇ ಬೇರೆ ಬೇರೆ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಹೆಚ್ಚು ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಿಡಿಎಯಲ್ಲಿ ಮೊದಲು ಡೆಪ್ಯೂಟಿ ಸೆಕ್ರೆಟರಿ ಆಗಿದ್ದು, ನಂತರ ಭೂಸ್ವಾಧೀನ ಅಧಿüಕಾರಿಯಾಗಿದ್ದರು. ಸದ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿರುವ ಡಾ. ಸುಧಾ ಅಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ನಿದ್ದೆಗಣ್ಣಿನಲ್ಲಿದ್ದ ಕೆಎಎಸ್ ಅಧಿಕಾರಿಗೆ ಶಾಕ್..!
ಇಂದು ಬೆಳಿಗ್ಗೆ 6.30ಕ್ಕೆ ಎಸಿಬಿ ಅಧಿಕಾರಿಗಳ ತಂಡ ಕೆಎಎಸ್ ಅಧಿಕಾರಿ ಸುಧಾ ಮನೆ ಬಾಗಿಲಲ್ಲಿ ನಿಂತಿತ್ತು. ವೀಕೆಂಡ್‍ನ ನಿದ್ದೆಗಣ್ಣಿನಲ್ಲಿದ್ದ ಸುಧಾ ಅವರ ಕೊಡಿಗೆಹಳ್ಳಿಯ ಮನೆಗೆ ಹೋದ ಎಸಿಬಿ ಅಧಿಕಾರಿಗಳು ಬೆಲ್ ಮಾಡಿದ್ರು ಬಾಗಿಲು ತೆಗೆಯಲು ತಡಮಾಡಿದ್ದಾರೆ. ನಂತರ ಹಲವು ಬಾರಿ ಬೆಲ್ ಮಾಡಿದ ನಂತರ ನಿದ್ದೆಗಣ್ಣಿನಿಂದಲೇ ಬಂದ ಸುಧಾ ಡೋರ್ ಓಪನ್ ಮಾಡಿದ್ದಾರೆ. ನಂತರ ಕೋರ್ಟ್ ಸರ್ಚ್ ವಾರೆಂಟ್ ತೋರಿಸಿ ಎಸಿಬಿ ಅಧಿಕಾರಿಗಳು ಸುಧಾ ಅವರ ಮನೆಯೊಳಗೆ ಎಂಟ್ರಿ ಕೊಟ್ಟು ತೀವ್ರ ಶೋಧ ನಡೆಸಿದ್ದಾರೆ.

ಸುಧಾರದ್ದು ಮನೆಯಲ್ಲ, `ಸುಧಾ ಗೋಲ್ಡ್ ಖಜಾನೆ’
ಕೆಎಎಸ್ ಅಧಿಕಾರಿ ಡಾ.ಸುಧಾ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದೆ.
ಕೊಡಿಗೇಹಳ್ಳಿಯಲ್ಲಿರುರುವ ಸುಧಾ ಅವರ ವಿಲ್ಲಾ ಯಾವ ಅರಮನೆಗೂ ಕಮ್ಮಿ ಇಲ್ಲ. ಈ ಅರಮನೆಯಲ್ಲಿ ಬಗೆದಷ್ಟೂ ಚಿನ್ನಾಭರಣಗಳು ಸಿಕ್ಕುತ್ತಿವೆ. ಬೆಳಿಗ್ಗೆ 6.30ಕ್ಕೆ ಆರಂಭವಾದ ಎಸಿಬಿ ಅಧಿಕಾರಿಗಳ ಶೋಧ ಮಧ್ಯಾಹ್ನ 2 ಗಂಟೆ ಆದರೂ ಮುಂದುವರೆದಿದೆ. ಹೀಗಾಗಿ ಸುಧಾ ಅವರದ್ದು ಮನೆಯೋ, ಗೋಲ್ಡ್ ಖಜಾನೆಯೋ ಎಂಬ ಅನುಮಾನ ಅಧಿಕಾರಿಗಳನ್ನು ಕಾಡುತ್ತಿದೆ.

kas sudha
ಸುಧಾ ಮನೆಯಲ್ಲಿ ಸಿಕ್ಕ ಮಹತ್ವದ ದಾಖಲೆಗಳು ಹಾಗೂ ಬ್ಯಾಂಕ್ ಖಾತೆಯ ಪಾಸ್ ಬುಕ್‍ಗಳನ್ನ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಸುಧಾ ಅವರ ಆಸ್ತಿ ಮತ್ತು ಹಣದ ಎಲ್ಲಾ ವ್ಯವಹಾರದ ಕೆಲ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಯುತ್ತಿದೆ.
ಕೊಡಿಗೇಹಳ್ಳಿಯ ಸುಧಾರ ನಿವಾಸಕ್ಕೆ ಅಕ್ಕಸಾಲಿಗನನ್ನು ಸಿಸಿಬಿ ಅಧಿಕಾರಿಗಳು ಕರೆಸಿಕೊಂಡು ತೂಕ ಹಾಕಿಸುತ್ತಿದ್ದಾರೆ. ಮನೆಯಲ್ಲಿ ಸಿಕ್ಕ ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದ್ದು, ಎಷ್ಟು ಪ್ರಮಾಣದಲ್ಲಿದೆ ಎಂದನ್ನು ಅಕ್ಕಸಾಲಿಗನ ಮೂಲಕ ಅಂದಾಜು ಮಾಡಿಸಲಿದ್ದಾರೆ

ಕೆಎಎಸ್ ಅಧಿಕಾರಿ ಸುಧಾ ಪತಿ ಚಿತ್ರ ನಿರ್ಮಾಪಕ..!
ಬಿಡಿಎ ಅಧಿಕಾರಿಯಾಗಿದ್ದ ಡಾ. ಸುಧಾ ಪತಿ ಸ್ಟ್ರೋನಿ ಫಾಯಿಸ್ ಸ್ಯಾಂಡಲ್‍ವುಡ್‍ನ ನಿರ್ಮಾಪಕ. ಸುಧಾ ಕ್ರಿಯೇಷನ್ ಬ್ಯಾನರ್ ಅಡಿ ಸ್ಟ್ರೋನಿ ಫಾಯಿಸ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರ  ನಿರ್ಮಾಣದ ಜೊತೆಗೆ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದಾರೆ.  ರಾಮನ ಸವಾರಿ ಎಂಬ ಕನ್ನಡ ಚಿತ್ರವನ್ನು ಸ್ಟ್ರೋನಿ ಫಾಯಿಸ್ ನಿರ್ಮಾಣ ಮಾಡಿದ್ದಾರೆ.

sudha husband

ಡಾ.ಸುಧಾ ಮೇಲಿರುವ ಪ್ರಮುಖ ಆರೋಪಗಳು..
2005ರ ಬ್ಯಾಚ್‍ನ ಕೆಎಎಸ್ ಅಧಿಕಾರಿಯಾಗಿರುವ ಡಾ. ಸುಧಾ, ಬಿಡಿಎದಲ್ಲಿ ವಿಶೇಷ ಭೂಸ್ವಾದೀನ ಅಧಿಕಾರಿಯಾಗಿದ್ದರು. ಈ ವೇಳೆ ಕೆಂಪೇಗೌಡ ಲೇಔಟ್ ಹಾಗೂ ವಿಶ್ವೇಶ್ವರಯ್ಯ ಲೇಔಟ್ ನಿರ್ಮಾಣದ ಕಾರ್ಯಕ್ಕೆ ಬಿಡಿಎ ಮುಂದಾಗಿತ್ತು.
ಈ ವೇಳೆ ಜಮೀನಿನ ಮೂಲ ಮಾಲೀಕರು ಹಾಗೂ ಬಿಡಿಎ ನಡುವಿನ ದಲ್ಲಾಳಿಗಳ ಜೊತೆ ಕಿಕ್ ಬ್ಯಾಕ್ ಪಡೆದ ಆರೋಪ ಸುಧಾ ಅವರ ಮೇಲಿದೆ. ದಲ್ಲಾಳಿಗಳಿಂದ ಕೋಟಿ ಕೋಟಿ ಹಣ ಲಂಚ ಪಡೆದು, ಬಂದ ಹಣದಲ್ಲಿ ಪತಿಯ ರಿಯಲ್ ಎಸ್ಟೇಟ್‍ಗೆ ಹೂಡಿಕೆ ಮಾಡಿರೋ ಆರೋಪವಿದೆ.
ಈ ಆರೋಪ ಕೇಳಿಬಂದ ಹಿನ್ನಲೆ ಬಿಡಿಎಯಿಂದ ಸುಧಾ ಅವರನ್ನ ರಿಲೀವ್ ಮಾಡಲಾಗಿತ್ತು. ನಂತರ ಮಾಹಿತಿ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಡಾ. ಸುಧಾ ಅಲ್ಲಿ ಅಧಿಕಾರ ವಹಿಸಿಕೊಂಡ ದಿನದಿಂದ ಇದುವರೆಗೂ ಕಚೇರಿಗೆ ಹೋಗಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

Tags: acb raidbangalorebda officerdr.b sudhakas officerMysoreUdupi
ShareTweetSendShare
Join us on:

Related Posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

by Shwetha
February 17, 2026
0

ಬೆಂಗಳೂರು: ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯಾದ ಜನ ಗಣ ಮನಕ್ಕೆ ಸರಿಸಮಾನವಾದ ಸ್ಥಾನಮಾನ ನೀಡಲು ಹೊರಟಿರುವ ಕೇಂದ್ರ ಸರಕಾರದ ಕ್ರಮವು ರಾಷ್ಟ್ರಗೀತೆಯ ಘನತೆ ಹಾಗೂ ಸಂವಿಧಾನಾತ್ಮಕ ಸ್ಥಾನಮಾನವನ್ನೇ...

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

KSRTCಯಲ್ಲಿ ಲಗೇಜ್ ದರ ಭಾರೀ ಏರಿಕೆ

by Shwetha
February 17, 2026
0

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಫೆಬ್ರವರಿ 16ರಿಂದಲೇ ಜಾರಿಗೆ ಬಂದಿದೆ. ಈ...

ಭಾರತದ ಎದುರು ಸೋಲು… ಟಿ20 ವಿಶ್ವಕಪ್‌ನಲ್ಲಿ ಪಾಕ್ ಗೆ ಸಂಕಷ್ಟ

ಭಾರತದ ಎದುರು ಸೋಲು… ಟಿ20 ವಿಶ್ವಕಪ್‌ನಲ್ಲಿ ಪಾಕ್ ಗೆ ಸಂಕಷ್ಟ

by Shwetha
February 17, 2026
0

ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಕಂಡ ಸೋಲು ಪಾಕಿಸ್ತಾನ ತಂಡವನ್ನು ಕಠಿಣ ಪರಿಸ್ಥಿತಿಗೆ ನೂಕಿದೆ. ಗ್ರೂಪ್ ಎ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮುಂದಿನ ಪಂದ್ಯವನ್ನು...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 17, 2026
0

ದಿನ ಭವಿಷ್ಯ: 17-02-2026 ಮೇಷ ರಾಶಿ ಇಂದು ನಿಮ್ಮ ರಾಶ್ಯಾಧಿಪತಿ ಕುಜನ ದಿನವಾದ್ದರಿಂದ ನಿಮಗೆ ಉತ್ಸಾಹ ಹೆಚ್ಚಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಜಯ ಸಿಗಲಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ...

India AI Impact Summit: Prime Minister Narendra Modi visits Jio Pavilion

ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ: ಜಿಯೋ ಪೆವಿಲಿಯನ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

by admin
February 16, 2026
0

• ಆಕಾಶ್ ಅಂಬಾನಿ ಅವರು ಜಿಯೋದ ಎಐ ಪರಿಸರ ವ್ಯವಸ್ಥೆಯ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು • ಜಿಯೋ ಇಂಟೆಲಿಜೆನ್ಸ್ ನಿಂದ ಜಿಯೋ ಆರೋಗ್ಯ ಎಐ ವರೆಗಿನ ಅನೇಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram